Hubballi news: ಹುಬ್ಬಳ್ಳಿ: ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಬರುವ ಅ.21 ರಂದು ಹುಬ್ಬಳ್ಳಿಯಿಂದ ಧರವಾದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗಡದಿನ್ನಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನುದಾನರಹಿತ ಶಾಲಾ ಕಾಲೇಜು ನೌಕರರ ಕನಿಷ್ಠ ಮೂಲ ವೇತನ ಮತ್ತು ಸೇವಭದ್ರತೆ ಹಾಗೂ ಇತರೆ 11 ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹುಬ್ಬಳ್ಳಿಯಿಂದ ಧಾರವಾಡ ವರೆಗೆ ಪಾದಯಾತ್ರೆ. ಮೂಲಕ ಅ.21 ರಂದು ಹುಬ್ಬಳ್ಳಿ ಚೆನ್ನಮ್ಮ ವೃತ್ತದಿಂದ 100 ಕ್ಕೂ ಹೆಚ್ಚು ಶಿಕ್ಷಕರು ಪಾದಯಾತ್ರೆ ಮೂಲಕ ಧಾರವಾಡಕ್ಕೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈರಪ್ಪ ಎಮ್ಮಿ , ಡಾ.ಬಸವರಾಜ ಅಂಗಡಿ, ಕಾರ್ಯಾಧ್ಯಕ್ಷ ಆರ್.ರಂಜನ್, ಸಂ ಕಾರ್ಯದರ್ಶಿ ಸಂಜೀವ ಶಿರಗನಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..