ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಮತ್ತೊಂದು ಸ್ವಾಭಿಮಾನದ ಅಸ್ತ್ರ ಪ್ರಯೋಗ ಮಾಡಲಾಗಿದೆ. ಸುಮಲತಾ ಬಳಿಕ ಜೆಡಿಎಸ್ ನಾಯಕರಿಂದಲೇ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ ಬಳಸಲಾಗಿದೆ.
ಜೆಡಿಎಸ್ ವಿರುದ್ಧ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮೂವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಶ್ರೀನಿವಾಸ್ ಅಳಿಯ ಯೋಗೇಶ್, ಮಹಾಲಿಂಗೇಗೌಡ ಸ್ವಾಭಿಮಾನಿ ಪಡೆ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮೂವರಲ್ಲಿ ಒಬ್ಬರನ್ನು ಚುನಾವಣೆಯ ಕಣದಲ್ಲಿ ಉಳಿಸುತ್ತೇವೆ. ಇಂದು ಮಾತುಕತೆ ನಡೆಸಿ ಇಬ್ಬರು ನಾಮಪತ್ರ ವಾಪಸ್ಸು ತೆಗೆದುಕೊಳ್ಳುತ್ತಾರೆ. ಒಬ್ಬರನ್ನು ಕಣದಲ್ಲಿ ಉಳಿಸಿ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸುತ್ತೇವೆ. ನಾನು ನಮ್ಮಲ್ಲಿ ಒಬ್ಬರಿಗೆ ಟಿಕೆಟ್ ಕೊಡಿ ಅಂತಾ ಕೇಳಿದ್ದೆ. ಆದ್ರೆ, ಈಗ ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ. ನಾವು ಕುಮಾರಸ್ವಾಮಿ ಮನವೊಲಿಕೆ ಮಾಡಿದ್ರು ಒಪ್ಪಲ್ಲ. ನಾವು ಪಕ್ಷೇತರವಾಗಿ ಸ್ವಾಭಿಮಾನದಿಂದ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲೇ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಲಾಗುತ್ತಿದೆ.
‘ನೀನು ಗಂಡ್ಸೆ ಅಲ್ಲ ಅಂತೆಲ್ಲ ನನ್ನನ್ನ ಬೈದ್ರು. ನಾನು ಸಹಿಸಿಕೊಂಡೆ ಆದ್ರೆ…’
ಅತೀಕ್ ಅಹಮದ್‌ಗೆ ಭಾರತ ರತ್ನ ನೀಡಬೇಕು ಎಂದವನನ್ನ ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್..

