Saturday, April 19, 2025

Latest Posts

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ಫೋಟೋ ವೈರಲ್

- Advertisement -

Hubballi News: ಹುಬ್ಬಳ್ಳಿ: ವರ್ಷದ ಹಿಂದೆ ಸುವರ್ಣ ವಿಧಾನ ಸೌಧದ ಆವರಣದ ಪ್ರವೇಶದ್ವಾರದ ಮೆಟ್ಟಿಲಿನ ಮೇಲೆ ಶಾವಿಗೆ, ಸಂಡಿಗೆ, ಹಪ್ಪಳ ಒಣ ಹಾಕಿದ್ದ ವಿಡಿಯೋ ಭಾರೀ ಸದ್ದು ಮಾಡಿತ್ತು.

ಇದೀಗ ಇದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಗೇಟ್‌ ಮೇಲೆ ಮಹಿಳೆಯೊಬ್ಬರು ಬಟ್ಟೆಗಳನ್ನು ಒಣಗಿಸಲು ಹಾಕಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಎದುರಿರುವ ಪ್ರಮುಖ ಗೇಟ್‌ ಮೇಲೆ ಅಲೆಮಾರಿ ಮಹಿಳೆಯೊಬ್ಬರು ಬಟ್ಟೆಗಳನ್ನು ಒಗೆದು ಒಣ ಹಾಕಿದ್ದಾರೆ. ಇದರಿಂದ ಮಹಾನಗರ ಪಾಲಿಕೆ ಸಿಬ್ಬಂದಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಪಾಲಿಕೆ‌ ಕಚೇರಿಯ ಎದುರಿಗೆ ಇರುವ ಎಂಟ್ರಿ ಮತ್ತು ಎಕ್ಸಿಟ್ ಗೇಟ್ಗಳಿಗೆ ಬೀಗ ಹಾಕಲಾಗಿದೆ.

ಇದನ್ನು ಗಮನಿಸಿದ ಮಹಿಳೆ ಇಲ್ಲಿ ಯಾರು ಬರಲ್ಲವೇನೂ ಎಂದು ಬಟ್ಟೆಗಳನ್ನು ಒಣಗಲು ಹಾಕಿದ್ದಾರೆ. ಅಲೆಮಾರಿ ಕುಟುಂಬಕ್ಕೆ ಸೇರಿದ ಮಹಿಳೆಯ ಈ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೆಇಎ ಪರೀಕ್ಷೆ ಅಕ್ರಮ ಹಗರಣ ಕಿಂಗ್ ಪಿನ್ ಕಾಂಪೌಂಡ್ ಹಾರಿ ಪರಾರಿ

ಹಾಸನಾಂಬೆಯ ದರ್ಶನ ಪಡೆದ ಕುಮಾರಸ್ವಾಮಿ ದಂಪತಿ

ಜಗದೀಶ್ ಶೆಟ್ಟರ್ ಇಂತಹ ಹಲ್ಕಾ ಕೆಲಸ ಬಿಡಬೇಕು: ಶೆಟ್ಟರ್ ವಿರುದ್ಧ ಯತ್ನಾಳ್ ವಾಗ್ದಾಳಿ

- Advertisement -

Latest Posts

Don't Miss