Hassan News: ಹಾಸನ : ಹಾಸನದಲ್ಲಿ ಭಯಾನಕ ಘಟನೆ ನಡೆದಿದ್ದು, ಹತ್ತನೇ ತರಗತಿ ವಿದ್ಯಾರ್ಥಿನಿ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಅಪ್ರಾಪ್ತೆಯಾಗಿದ್ದಾಳೆ. ಇದೇ ಗ್ರಾಮದ ಮಂಜುನಾಥ್ ಎಂಬುವವರ ಪುತ್ರಿಯಾಗಿರುವ ಭೂಮಿಕಾ, ಶಾಲೆಗೆ ಹೋಗಿ ವಾಪಸ್ ಮನೆಗೆ ಬರುವಾಗ, ರಸ್ತೆಯಲ್ಲಿ ಅಡ್ಡಗಟ್ಟಿರುವ ಯುವಕ, ಆಕೆಯನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಶರತ್ ಎಂಬಾತ ಈ ರೀತಿ ಮಾಡಿದ್ದಾನೆಂದು ಆರೋಪಿಸಲಾಗಿದೆ. ಭೂಮಿಕಾಗೆ ಈ ಯುವಕನಿಗೆ ಮೊದಲೇ ಪರಿಚಯವಿದ್ದಳು ಎನ್ನಲಾಗಿದ್ದು, ಈಕೆಯನ್ನು ಶರತ್ ಪ್ರೀತಿಸುತ್ತಿದ್ದನಂತೆ. ಆದರೆ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ, ಶರತ್ ಕೊಲೆ ಮಾಡಿದ್ದಾನೆಂಬ ಆರೋಪವಿದೆ. ಅರಸೀಕೆರರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ
ಅಕ್ರಮ ದಂಧೆಕೋರರು, ಜೂಜುಕೋರರಿಗೆ ನಡುಕ ಹುಟ್ಟಿಸಿದ ಸಿಪಿಐ ಮುರಗೇಶ ಚನ್ನಣ್ಣವರ: 27ಜನರ ಬಂಧನ