Viral News: ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಹಾಗಾಗಿಯೇ ಅಲ್ಲಿ ಗಣಪತಿ ಹಬ್ಬವನ್ನು ಅಷ್ಟು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಮುಂಬೈನ ಲಾಲ್ಬಾಗ್ಚಾ ರಾಜಾ ಎಂದೇ ಪ್ರಸಿದ್ಧನಾದ ಗಣೇಶನನ್ನು ನೋಡಲು ದೇಶದ ನಾನಾ ಭಾಗದಿಂದ ಜನ ಬರುತ್ತಾರೆ.
ಬಾಲಿವುಡ್ ಸೆಲೆಬ್ರಿಟಿಗಳು, ಅಂಬಾನಿ ಫ್ಯಾಮಿಲಿ., ಬೇರೆ ಬೇರೆ ಶ್ರೀಮಂತ ಉದ್ಯಮಿಗಳೆಲ್ಲ ಈ ರಾಜನಿಗಾಗಿ ಲಕ್ಷ ಲಕ್ಷ ದೇಣಿಗೆ ನೀಡುತ್ತಾರೆ. ಇಲ್ಲಿ ಅದೆಂಥ ಪರಿ ರಶ್ ಇರುತ್ತದೆ ಎಂದರೆ, ಕಾಲಿಡಲು ಜಾಗವಿರುವುದಿಲ್ಲ. ಅಷ್ಟು ಜನಜಂಂಗುಳಿ.
ಗಣೇಶನನ್ನು ಕೂರಿಸಿದಾಗಿನಿಂದ, ಬೀಳ್ಕ“ಡುವವರೆಗೂ ಜನ ಬರುತ್ತಲೇ ಇರುತ್ತಾರೆ. ಇಂಥ ಸಂದರ್ಭದಲ್ಲಿ ಓರ್ವ ಯುವತಿ 2 ವರ್ಷದ ಹಿಂದೆ ತನ್ನ ಮನೆಯವರ ಜತೆ ಹೋದಾಗ, ನಡೆದ ಕಹಿ ಘಟನೆ ಹೇಳಿ, ನೀವು ಕೂಡ ಲಾಲ್ಬಾಗ್ ರಾಜನನ್ನು ನೋಡಲು ಹೋಗುವಾಗ ಎಚ್ಚರದಿಂದಿರಿ ಎಂದಿದ್ದಾರೆ.
ಹಾಗಾದ್ರೆ ಆಕೆಯ ಜತೆ ನಡೆದ ಕಹಿ ಘಟನೆಯಾದ್ರೂ ಏನು ಎಂಬ ಪ್ರಶ್ನೆಗೆ ಉತ್ತರ. ಆಕೆ ಲಾಲ್ಬಾಗ್ ರಾಜನನ್ನು ನೋಡಲು, ತನ್ನ ಮನೆಯಲ್ಲಿರುವ ಇಬ್ಬರು ಸಹೋದರಿ, ಮತ್ತು ಇಬ್ಬರು ಪುರುಷರ ಜತೆ ಹೋಗಿದ್ದಳು.
ಆಕೆ ಲೈನ್ನಲ್ಲಿ ನಿಂತಾಗ, ಆಕೆಯ ಹಿಂದೆ ಓರ್ವ ವಯಸ್ಸಾದ ವ್ಯಕ್ತಿ ನಿಂತಿದ್ದನಂತೆ. ಆಕೆ ಆತನನ್ನು ಅಂಕಲ್ ಎಂದು ಸಂಬೋಧಿಸಿದ್ದಾಳೆ. ಅಂದರೆ, ಆತ ಆಕೆಯ ಅಪ್ಪನ ವಯಸ್ಸಿನವನೇ ಆಗಿರಬೇಕು. ಅಂಥ ವ್ಯಕ್ತಿ ಆಕೆಯ ಹಿಂದೆ ನಿಂತಿದ್ದ.
ಕೆಲ ಸಮಯದ ಬಳಿಕ, ಆಕೆಯ ಪೃಷ್ಠಕ್ಕೆ ಏನೋ ತಾಕಿದಂತಾಯ್ತು. ಏನೆಂದು ನೋಡಿದಾಗ, ಆ ವ್ಯಕ್ತಿ ಏನೂ ತಿಳಿದೇ ಇಲ್ಲ ಎಂಬಂತೆ ನಿಂತಿದ್ದ. ಅಲ್ಲದೇ ಆತ ತನ್ನ ಮುಂಭಾಗ ಕವರ್ ಮಾಡುವ ಬ್ಯಾಗ್ ಧರಿಸಿದ್ದ.
ಆಗ ಆಕೆ ತನಗೆ ಭ್ರಮೆ ಇರಬೇಕು. ಏನೋ ಅಪ್ಪಿ ತಪ್ಪಿ ತಾಕಿರಬೇಕು ಎಂದು ಸುಮ್ಮನಾಗಿದ್ದಾಳೆ. ಹಾಗೆ ಎರಡು ಬಾರಿಯಾಗಿ, ಮೂರನೇ ಬಾರಿ ತಾಕಿದ ತಕ್ಷಣ ಹಿಂದಿರುಗಿ ನೋಡಿದ್ದಾಳೆ. ಅದನ್ನು ನೋಡಿ ಶಾಕ್ ಆಗಿದ್ದಾಳೆ.
ತಾನಿಲ್ಲಿ ಭಕ್ತಿಯಿಂದ ಲಾಲ್ಬಾಗ್ ರಾಜನ ದರ್ಶನಕ್ಕೆ ಬಂದಿದ್ದು, ಇಂಥ ವ್ಯಕ್ತಿಗಳೆಲ್ಲಾ ಇಲ್ಲಿ ಬರುತ್ತಾರಾ ಅನ್ನೋ ಯೋಚನೆ ಆಕೆಗೆ ಬಂದಿದೆ. ಏಕೆಂದರೆ ಆತ ಮಾಡಿದ ಕೆಲಸ ಅಷ್ಟು ಅಸಹ್ಯವಾಗಿತ್ತು. ಆತ ತನ್ನ ಯೂರಿನ್ ಪಾಸ್ ಮಾಡುವ ಜಾಗವನ್ನು ಆಕೆ ಹಿಂಭಾಗಕ್ಕೆ ತಾಕಿಸುತ್ತಿದ್ದ. ಮತ್ತು ಆಕೆಗೆ ತಿಳಿಯಬಾರದೆಂದು, ಬ್ಯಾಗ್ ಅಡ್ಡ ಹಿಡಿದಿದ್ದ. ಆ ವೇಳೆ ಆಕೆ ಆತನ ಮೇಲೆ ಹಲ್ಲೆ ಮಾಡಲು ಯತ್ನಿಸಿದಳು. 1 ಏಟು ತಿಂದ ತಕ್ಷಣ ಆತ ಅಲ್ಲಿಂದ ಓಡಿದ್ದಾನೆ.
ಹೀಗಾಗಿ ಇಂಥ ಸೈಕೋಗಳೆಲ್ಲ ರಶ್ ಇರುವ ಜಾಗದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದಕ್ಕಾಗಿಯೇ ಬರುತ್ತಾರೆ. ನೀವು ರಶ್ ಇರುವ ಜಾಗಕ್ಕೆ ಹೋಗುವ ಮುನ್ನ ಯೋಚಿಸಿ ಎಂದಿದ್ದಾಳೆ.
ಇನ್ನು ಕೆಲ ವರ್ಷಗಳ ಹಿಂದೆ ಲಾಲ್ಬಾಗ್ ರಾಜನನ್ನು ಬೀಳ್ಕ“ಡುವ ಸಂದರ್ಭದಲ್ಲಿ, ಓರ್ವ ವ್ಯಕ್ತಿ ಬೇಕಂತಲೇ, ಓರ್ವ ಯುವತಿಯ ಎದೆಯನ್ನು ಸ್ಪರ್ಶಿಸಿದ್ದ. ಈ ವೀಡಿಯೋ ವೈರಲ್ ಆಗಿ, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗ“ಳ್ಳಲಾಗಿತ್ತು.




