Sunday, November 9, 2025

Latest Posts

ನಾಳೆ ಹಸೆಮಣೆ ಏರಬೇಕಿದ್ದ ಯುವತಿ ಸಾವು

- Advertisement -

ಹೊಸಬಾಳಿನ ಕನಸು ಕಂಡಿದ್ದ ಯುವತಿ ಬಾಳಲ್ಲಿ, ವಿಧಿ ಬೇರೆಯದ್ದೇ ಆಟ ಆಡಿದೆ. ಜೀವನದ ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದ ಯುವತಿ, ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ, ಸಾವನ್ನಪ್ಪಿದ್ದಾರೆ. ವೈದ್ಯರ ಪ್ರಾಥಮಿಕ ವರದಿ ಪ್ರಕಾರ, ಶೃತಿ ಅವರಿಗೆ ಲೋ ಬಿಪಿಯಿಂದ ಹೃದಯಾಘಾತ ಆಗಿದೆಯಂತೆ.

ಶೃತಿ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬಾತನೊಂದಿಗೆ ಅಕ್ಟೋಬರ್‌ 31ರ ಶುಕ್ರವಾರ ನಡೆಯಬೇಕಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದೆ. ಶೃತಿ ಸಾವು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ. ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಘಟನೆ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಮದುವೆ ದಿನಕ್ಕೂ ಮುನ್ನವೇ ಇಂತಹ ದುರಂತ ಸಂಭವಿಸಿದ್ದು, ವಿಧಿ ಅಟ್ಟಹಾಸ ಮೆರೆದಿದೆ.

- Advertisement -

Latest Posts

Don't Miss