Tuesday, October 14, 2025

Latest Posts

ಠಾಣೆಯ ಆವರಣದಲ್ಲಿಯೇ ತಾಳಿ ಕಟ್ಟಿದ ಯುವಕ: ಜೈ ಶ್ರೀರಾಮ್ ಘೋಷಣೆ

- Advertisement -

Dharwad News: ಧಾರವಾಡ: ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಿದ್ದರೇ, ಧರ್ಮ ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ (Love Marriage) ಆಗೋದಕ್ಕೆ ಕಾನೂನಿನಲ್ಲಿ ಒಪ್ಪಿಗೆಯೇ ಇದೆ. ಆದರೆ ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು ಬೇರ್ಪಡಿಸಲು ಮುಂದಾಗಿರೋ ಪೊಲೀಸರ ಮೇಲೆಯೇ ಬಂದಿತ್ತು. ಕೊನೆಗೆ ಠಾಣೆಯಲ್ಲಿಯೇ ಪೊಲೀಸರು (Dharwad Police) ಜೋಡಿಗೆ ಮದುವೆ ಮಾಡಿ ಕಳುಹಿಸಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ್ ಮಾಯಕಾರ ಹಾಗೂ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರ ಠಾಣೆಯ ಆವರಣದಲ್ಲಿಯೇ ಮದುವೆಯಾಗಿದ್ದಾರೆ. ಒಂದೇ ಗ್ರಾಮದವರಾದ ಇವರಿಬ್ಬರು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮನೆಯವರಿಗೆ ಗೊತ್ತಾದಾಗ, ಯುವತಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು.

ಯುವತಿ ಪೋಷಕರಿಂದ ದೂರು ದಾಖಲು

ಈ ಹಿನ್ನೆಲೆ ಪರಸ್ಪರ ಮೆಚ್ಚಿ ರಿಜಿಸ್ಟರ್ ವಿವಾಹ ಸಹ ಆಗಿದ್ದರು. ಆದರೆ ವಿವಾಹವಾದ ಸುದ್ದಿ ತಿಳಿದ ಯುವತಿ ಮನೆಯವರು ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡಿದ್ದರು.

ಬಜರಂಗದಳದ ಕಾರ್ಯಕರ್ತರಿಂದ ಪ್ರತಿಭಟನೆ

ಮಂಜುನಾಥ್ಗೆ ಪೊಲೀಸರಿಂದ ಒತ್ತಡ ಬಂದ ಹಿನ್ನೆಲೆ ಉಮೆಕುಲ್ಸುಮಾಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದರು. ಆದರೆ ಈ ವಿಷಯ ತಿಳಿದ ತಕ್ಷಣವೇ ಠಾಣೆ ಎದುರಿನಲ್ಲಿಯೇ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಯಾವಾಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾರೋ, ಆಗ ಪೊಲೀಸರು ಅನಿವಾರ್ಯವಾಗಿ ವಶಕ್ಕೆ ಪಡೆದಿದ್ದ ಮಂಜುನಾಥ್ನನ್ನು ಬಿಡುವುದರ ‌ಜೋತೆಗೆ ಉಮೆಕುಲ್ಸುಮಾಳರನ್ನು ಸಾಂತ್ವನ ಕೇಂದ್ರದಿಂದ ಕರೆಯಿಸಿ ಪುನಃ ಇಬ್ಬರನ್ನು ಒಂದು ಮಾಡಿದರು.

ಹೇಳಿಕೆ ನೀಡಿದ ಯುವತಿ

ಹೀಗಾಗಿ ಭಜರಂಗದಳದ ಕಾರ್ಯಕರ್ತರು, ಠಾಣೆ ಆವರಣದಲ್ಲಿಯೇ ಇಬ್ಬರಿಗೂ ಮತ್ತೊಮ್ಮೆ ಮದುವೆಯನ್ನು ಸಹ ಮಾಡಿಸಿದ್ದರು. ಸದ್ಯ ಇಬ್ಬರು ಮದುವೆಯಾಗಿದ್ದು, ಯುವತಿ ತಾನು ಒಪ್ಪಿ ಮದುವೆಯಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರಿಂದ ಪೊಲೀಸರು ಕಿಡ್ನಾಪ್ ಕೇಸ್ ಕೈಬಿಟ್ಟಿದ್ದಾರೆ.

ಪೋಷಕರ ವಿರುದ್ಧ ದೂರು ಸಲ್ಲಿಸಿದ ಯುವತಿ

ಅಲ್ಲದೇ ತನ್ನ ಮನೆಯವರಿಂದ ನನ್ನ ಪತಿ ಹಾಗೂ ಪತಿಯ ಮನೆಯವರಿಗೆ ಜೀವ ಬೆದರಿಕೆ ಇದೆ ಅಂತಾ ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾಳೆ.

ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!

ಅರ್ಜುನ’ನ ಸಾವಿಗೆ ಕಂಬನಿ ಮಿಡಿದ ಪ್ರಾಣಿ ಪ್ರಿಯ ‘ಡಿ ಬಾಸ್’ ದರ್ಶನ್

ಮುಂಬರುವ ಲೋಕಸಭೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ: ರೇಣುಕಾಚಾರ್ಯ ಭವಿಷ್ಯ

- Advertisement -

Latest Posts

Don't Miss