ಅಧಿಕಾರದ ಆಸೆಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ-ಮುಖ್ಯಮಂತ್ರಿ ಚಂದ್ರು.

ಬೆಂಗಳೂರು: ಕನ್ನಡ ಚಲನಚಿತ್ರದ ಖ್ಯಾತ ಹಿರಿಯ ನಟ,ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ದಲ್ಲಿ ಗುರುಸಿತಿಕೊಂಡಿದ್ದ ಮುಖ್ಯಮಂತ್ರಿ ಚಂದ್ರು,ಇಂದು ಆಮ್ ಆದ್ಮಿ ಪಕ್ಷಕ್ಕೆ ಇಂದು ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಪರಾಗ್ ಹೊಟೆಲ್ ನಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರ ಸಮ್ಮುಖದಲ್ಲಿ,ಇಂದು ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ನಾನು ಅಧಿಕಾರದ ಆಸೆಗೆ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲಾ ಎಂದು ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿ ಯಾವುದೇ ಷರತ್ತುಗಳಿಲ್ಲದೆ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ,
ವ್ಯಾಪಾರಿಕರಣದ ರಾಜಕಾರಣ ನನಗೆ ಬೇಸರ ತಂದಿದೆ. ಶಿಕ್ಷಣ ಹಾಗೂ ಆರೋಗ್ಯದಲ್ಲಿ ಹೊಸ ಬದಲಾವಣೆ ಆಗಬೇಕಿದೆ.ಭ್ರಷ್ಟಾಚಾರ ನಿರ್ಮೂಲನೆ ಸಿದ್ದಾಂತ ನನಗೆ ಇಷ್ಟ ಆಗಿದೆ ಎಂದು ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

ಸಾರ್ವಜನಿಕರ ಜೀವನ ಸುದಾರಿಸಲು ಜನರಿಗೆ ಪರ್ಯಾಯ ವ್ಯವಸ್ಥೆಯನ್ನು ತರಬೇಕಿದೆ.ಆಮ್ ಆದ್ಮಿ ಪಕ್ಷ ಉತ್ತಮವಾದ ಅಜಂಡವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಉತ್ತರ ಸೇವೆ ನೀಡುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು. ನಾಡಿನ ಜನೆತೆಗೆ ಪರ್ಯಾಯ ವ್ಯವಸ್ಥೆ ಆಗುವ ನಿಟ್ಟಿನಲ್ಲಿ ನಾನು ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಜಿಡಿಎಸ್ ಕೌಟುಂಬಿಕಕ್ಕೆ ಸೀಮಿತವಾದ ಪಕ್ಷ, ಬಿಜೆಪಿ ಒಂದೇ ಸಮಾಜಕ್ಕೆ ಸೀಮಿತವಾದ ಪಕ್ಷ,
ಚಡ್ಡಿ ಎಲ್ಲರಿಗೂ ಬೇಕು, ಕಾಂಗ್ರೆಸ್ ಪಕ್ಷ ಚಡ್ಡಿ ವಿಚಾರವನ್ನು ಪ್ರಸ್ತಾಪಿಸಿದ್ದು ಸರಿಯಲ್ಲ ಎಂದು ತಿಳಿಸಿದರು.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

About The Author