- Advertisement -
ಹೊಸದಿಲ್ಲಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ 200 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
200 ಮಿಲಿಯನ್ ಸ್ಟ್ರಾಂಗ್. ಇನ್ ಸ್ಟಾ ಕುಟುಂಬಕ್ಕೆ ಧನ್ಯವಾದ ಎಂದು ಕೊಹ್ಲಿ ಬರೆದಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ (450 ಮಿಲಿಯನ್) ಮತ್ತು ಲಿಯಾನೆಲ್ ಮೆಸ್ಸಿ (333ಮಿ) ನಂತರ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮೂರನೆ ಕ್ರೀಡಾಪಟು ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಿಂದ ಕೆಳಗಿಳಿದರು. ದಕ್ಷಿಣ ಆಫ್ರಿಕಾ ಸರಣಿ ನಂತರವೂ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಡುತ್ತಿಲ್ಲ ವಿಶ್ರಾಂತಿ ನೀಡಲಾಗಿದೆ.
- Advertisement -