National News: ತನ್ನನ್ನು ತಾನೇ ಬಾಲ ಸಂತ ಎಂದು ಕರೆದುಕೊಳ್ಳುವ ಅಭಿನವ್ ಅರೋರಾಗೆ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಆತನ ತಾಯಿ ಮೀಡಿಯಾ ಮುಂದೆ ಹೇಳಿದ್ದಾರೆ.
ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಮಾತ್ರ ದೇವರಿಗೇ ಗೊತ್ತು. ಯಾಕಂದ್ರೆ ಅಭಿನವ್ ಅರೋರಾ ತಂದೆ ತಾಯಿ, ಫಾಲೋವರ್ಸ್ ಹೆಚ್ಚಿಸಲು, ಮಗನನ್ನು ಫೇಮಸ್ ಮಾಡಿ, ದುಡ್ಡು ಮಾಡಲು ಹಲವು ಸರ್ಕಸ್ ಮಾಡುತ್ತಿದ್ದಾರೆ. ಹಾಗಾಗಿ ಮಗ ಇನ್ನಷ್ಟು ಪ್ರಸಿದ್ಧನಾಗಲಿ ಎಂದು ಸದ್ಯ ಚಾಲ್ತಿಯಲ್ಲಿರುವ ಬಿಷ್ಣೋಯ್ ಗ್ಯಾಂಗ್ ಹೆಸರು ಬಳಸಿಕೊಂಡಿದ್ದಾರೆ ಅಂತಲೇ ಹಲವರು ಹೇಳುತ್ತಾರೆ.
ಯಾರಿಗು ಅಭಿನವ್ ಅರೋರಾ..?: ಇನ್ನು ಈ ಅಭಿನವ್ ಅರೋರಾ ಯಾರು ಎಂದರೆ, ತನ್ನನ್ನು ತಾನು ಬಾಲ ಸಂತ ಎಂದು ಕರೆಯಲ್ಪಡುವ ಬಾಲಕ. ಸರಿಯಾಗಿ ಲೋಕ ಜ್ಞಾನದ ಅರಿವಿಲ್ಲದ ಈತನಿಗೆ ಮಹಾಭಾರತದ ಕಥೆಗಳೆಂದರೆ ಬಹಳ ಇಷ್ಟ. ಹಾಗಾಗಿ ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಇವರ ತಂದೆ ತಾಯಿ, ಈತ ರಾಧೆ ಕೃಷ್ಣರ ಪರಮ ಭಕ್ತನೆಂದು ತೋರಿಸುತ್ತಾರೆ.
ಎಲ್ಲಿ ಹೋದರೂ ರೀಲ್ಸ್ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತಾರೆ. ಈ ಢೋಂಗಿ ಬಾಲಕನಿಗೆ ಇನ್‌ಸ್ಟಾಗ್ರಾಮ್‌ನಲ್ಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಈಗ ಈ ಮೊದಲು ಮಾಂಸಾಹಾರಿಯಾಗಿದ್ದು, ಚಿಕನ್ ತಿನ್ನುತ್ತಿದ್ದನೆಂದು ತಾನೇ ಹೇಳಿಕೊಂಡಿದ್ದಾನೆ. ನೀನು ಮಾಂಸಾಹಾರ ಸೇವಿಸಿ, ಅದು ಹೇಗೆ ಸಂತನಾಗಲು ಸಾಧ್ಯ ಎಂದು ಜನ ಟ್ರೋಲ್ ಮಾಡುತ್ತಿದ್ದಾರೆ.
ಅಲ್ಲದೇ, ಕೆಲವರಿಗೆ ದುಡ್ಡು ಕೊಟ್ಟು, ಈ ಬಾಲಕನನ್ನು ಅಪ್ಪಿಕೊಂಡು ಅಳುವಂತೆ ಹೇಳಲಾಗುತ್ತದೆ. ಅದೇ ವೀಡಿಯೋ ಮಾಡಿ, ರೀಲ್ಸ್ ಮಾಡಿ, ಪ್ರಚಾರ ಪಡೆಯಲಾಗುತ್ತಿದೆ. ಜೊತೆಗೆ, ಸತ್ಸಂಗ, ಭಜನೆ ನಡೆಯುವಾಗ, ಹಿರಿಯ ಸಂತರೊಂದಿಗೆ ಕುಳಿತುಕೊಳ್ಳಲು ಒಪ್ಪಿಗೆ ಕೊಡದಿದ್ದರೂ, ಒತ್ತಾಯ ಪೂರ್ವಕವಾಗಿ ಅವರ ಅಕ್ಕಪಕ್ಕ ಕೂರಿಸುವ ಪ್ರಯತ್ನ ಮಾಡುತ್ತಾರೆ. ಬಳಿಕ ಅದನ್ನೇ ವೀಡಿಯೋ ಮಾಡಿ, ರೀಲ್ಸ್ ಮಾಡಾ, ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಾರೆ.
ಇನ್ನು ದುಡ್ಡು ಕೊಟ್ಟು ಪೋಡ್‌ಕಾಸ್ಟ್‌ಗಳಿಗೆ ಬರುವ ಈ ಬಾಲಕ, ಎಲ್ಲ ಸಂದರ್ಶನಗಳಲ್ಲಿಯೂ ಒಂದೇ ರೀತಿಯಾಗಿ ಮಾತನಾಡುತ್ತಾನೆ. ತಂದೆ ತಾಯಿ ಹೇಳಿಕೊಟ್ಟ ಭಾಷಣವನ್ನು ಕಂಠಪಾಠ ಮಾಡಿ, ಬಂದು ಕ್ಯಾಮೆರಾ ಮುಂದೆ ಹೇಳುವುದೇ ಇವನ ಪ್ರಚಾರ.
ಪ್ರಸಿದ್ಧ ಸಂತರಾದ ರಾಮ ಭದ್ರಾಚಾರ್ಯರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ, ಈ ಬಾಲಕ ಸ್ಟೇಜ್ ಮೇಲೆ ಹೋಗಿ, ರಾಮನಿಗೆ ಜೈಕಾರ ಹಾಕಿದ್ದ. ತಕ್ಷಣವೇ ರಾಮಭದ್ರಾಚಾರ್ಯರು, ಈ ಬಾಲಕನನ್ನು ಕೆಳಗೆ ಇಳಿಸಿ, ನನಗೆ ನನ್ನದೇ ಆದ ಗೌರವವಿದೆ ಎಂದಿದ್ದರು. ಅಲ್ಲದೇ, ಆ ಬಾಲಕ ಓರ್ವ ಮೂರ್ಖನೆಂದು ಹೇಳಿದ್ದರು. ರಾಮಭದ್ರಾಚಾರ್ಯರು ದೃಷ್ಠಿಹೀನರಾಗಿದ್ದರೂ ಕೂಡ, ಯಾರು ನಿಜವಾದ ದೇವರ ಭಕ್ತರು, ಯಾರು ಢೋಂಗಿಗಳು ಅಂತಾ ತಿಳಿಯುವಷ್ಟು ಚತುರರು. ಸದ್ಯ ಈ ಬಾಲಕ ಸನಾತನ ಧರ್ಮ ಪ್ರಚಾರಕ್ಕಿಂತ ಹೆಚ್ಚು ತನ್ನ ತೋರಿಕೆಯ ರೀಲ್ಸ್ ಬಗ್ಗೆಯೇ ಟ್ರೋಲ್ ಆಗುತ್ತಿದ್ದಾನೆ.