Thursday, October 16, 2025

Latest Posts

ಅಧಿಕಾರ ದುರ್ಬಳಕೆ ಮಾಡಿ, ಮಕ್ಕಳ ನಡುವೆ ಜಗಳ ತಂದಿಡುತ್ತಿರುವುದು ನೀಚತನದ ಪರಮಾವಧಿ: ಹೆಚ್ಡಿಕೆ

- Advertisement -

Political News: ತುಮಕೂರಿಗೆ ನೀರು ಹರಿಸುತ್ತಿರುವ ಬಗ್ಗೆ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧ, ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಟ್ವೀಟ್ ಮಾಡಿದ್ದಾರೆ.

ಕದ್ದುಮುಚ್ಚಿ ನೆರೆರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕಾಂಗ್ರೆಸ್ ಸರಕಾರ; ಆ ಜಲದ್ರೋಹವನ್ನು ಜನರಿಂದ ಮರೆಮಾಚಿಕೊಳ್ಳಲು ಈಗ ನಮ್ಮ ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳ ನಡುವೆ ನೀರಿನ ಜಗಳ ತಂದಿಡುತ್ತಿದೆ. ಹಾಸನ ಮತ್ತು ತುಮಕೂರಿನಲ್ಲಿ ಅಂತದ್ದೇ ‘ಜಲತಂಟೆ’ ಪ್ರಯೋಗಿಸುತ್ತಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಾಸನ ಜಿಲ್ಲೆ ಜನರು ಎಂದೂ ತುಮಕೂರಿಗೆ ನೀರು ಕೊಡುವುದನ್ನು ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ. ನಮಗೂ ನೀರು ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಜನರು ಎಂದರೆ ಅವಳಿ-ಜವಳಿ ಮಕ್ಕಳಂತೆ. ಅಂಥ ಮಕ್ಕಳ ನಡುವೆಯೇ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೆಂಕಿ ಹಾಕುತ್ತಿರುವುದು ನೀಚತನದ ಪರಮಾವಧಿ ಎಂದು ಹೆಚ್ಡಿಕೆ ಅಸಮಾಧಾನ ಹೊರಹಾಕಿದ್ದಾರೆ.

ನಾನು ನಿನ್ನೆ ಹಾಸನಕ್ಕೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಏನಿದೆ ಎನ್ನುವುದನ್ನು ತಿಳಿದುಕೊಂಡೆ. ತುಮಕೂರಿನ ಪರಿಸ್ಥಿತಿಯೂ ಕಷ್ಟವಿದೆ ಎನ್ನವುದೂ ನನಗೆ ಗೊತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಹೇಮಾವತಿ ತಾಯಿ ರಾಜಕೀಯ ದಾಳವಾಗಿದ್ದಾಳೆ. ಪೊಲೀಸ್ ರಾಜ್ ಸೃಷ್ಟಿಸಿ ಜನರ ದನಿ ಹುಡುಗಿಸುವ ಯತ್ನ ನಡೆಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಾಲೆ ಉದ್ದಕ್ಕೂ ಪೊಲೀಸ್ ಪಹರೆ ಹಾಕಿರುವುದು ಈ ಸರಕಾರ ನಮ್ಮ ಜನರ ಬಗ್ಗೆ ಹೊಂದಿರುವ ಕೀಳು ಮನಃಸ್ಥಿತಿಯನ್ನು ತೋರಿಸುತ್ತದೆ. ಪಹರೆ ಹಾಕಿ ನೀರು ಹರಿಸುವ ವರ್ತನೆ ಎರಡೂ ಜಿಲ್ಲೆಗಳ ಜನರಿಗೆ ಮಾಡುವ ಘೋರ ಅಪಮಾನ. ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು ಅವರೂ ಕೆಲ ದಿನಗಳ ಹಿಂದೆಯೇ ಹಾಸನಕ್ಕೂ ನೀರು ಕೊಡಿ, ಬೇರೆಯವರಿಗೂ ನೀರು ಕೊಡಿ ಎಂದು ಹೇಳಿದ್ದರು. ಈ ಕಡು ಬರದಲ್ಲಿ ಹನಿನೀರಿಗೆ ಎಷ್ಟು ತತ್ವಾರವಿದೆ ಎನ್ನುವುದು ಸರಕಾರಕ್ಕೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದರು. ಇನ್ನೊಬ್ಬರ ಮಾತು ಕೇಳುವ ವ್ಯವಧಾನ ಸರಕಾರಕ್ಕೆ ಇಲ್ಲದಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!

ಪ್ರತಾಪ್‌ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ

- Advertisement -

Latest Posts

Don't Miss