Hubballi political News: ಹುಬ್ಬಳ್ಳಿ: 2024 ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ನಂತರ ಅವರ ಲೆಕ್ಕಾಚಾರ ಇದೆ.. ಆದ್ರೆ ನಮ್ಮ ಲೆಕ್ಕಾಚಾರದ ಪ್ರಕಾರ 2024 ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ. ನೋಡೋಣ ಯಾರ ಲೆಕ್ಕಾಚಾರ ನಿಜ ಆಗತ್ತೆ ಅಂತಾ ಹೇಳಿದ್ದಾರೆ.
ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕೆಲವರು ಬರ್ತೀದಾರೆ, ನಮಗೇನೂ ಭಯ ಇಲ್ಲ. ಬಿಜೆಪಿ ಬಿಟ್ಟು ಯಾಕೆ ಬರ್ತೀದಾರೆ ಅವರನ್ನೆ ಕೇಳಿ. ಲೋಕಸಭೆ ಚುನಾವಣೆಗೆ ಸಿದ್ದತೆ ನಡೆದಿದೆ. ಬಿಜೆಪಿ ಕರ್ಮಕಾಂಡ ಜನರಿಗೆ ಮುಟ್ಟಿಸುತ್ತೇವೆ. ಹೈಕಮಾಂಡ್ ಲೋಕಸಭೆ ಚುನಾವಣೆಗಾಗಿ ಸರ್ವೆ ಮಾಡ್ತೀದಾರೆ. ನಾವು 70 ವರ್ಷ ಆಯ್ತು ಸ್ವತಂತ್ರ ಬಂದು.. ಕಾಂಗ್ರೆಸ್ ಪಕ್ಷದ ಹಣ 700 ಕೋಟಿ.. ಬಿಜೆಪಿ ಸರ್ಕಾರದ ಹಣ 8500 ಸಾವಿರ ಕೋಟಿ ಹಣ. ಸಾಹುಕಾರ ಪಕ್ಷ ಯಾರದೂ ಅನ್ನೋದ ಜನರಿಗೆ ಗೊತ್ತಾಗತ್ತೆ ಎಂದು ಲಾಡ್ ಹೇಳಿದ್ದಾರೆ.
ನಾನು IT ರಿಪೋರ್ಟ್ ಓದಿದೀನಿ. ಎಲ್ಲೂ ಕಾಂಗ್ರೆಸ್ ನಾಯಕರು ಅಂತಾ ಉಲ್ಲೇಖ ಇಲ್ಲ. ಇಷ್ಟು ವರ್ಷದಿಂದ ಅವರೇ ತನಿಖೆಯನ್ನು ಜೇಬಲ್ಲಿ ಇಟ್ಕೊಂಡು ಓಡಾಡುತ್ತಿದ್ದಾರೆ. ಇಷ್ಟು ವರ್ಷದಲ್ಲಿ ಯಾರಿಗಾದರೂ ಶಿಕ್ಷೆ ಆಗಿದೆಯಾ..? ನಮ್ಮ ಪಕ್ಷದಲ್ಲಿ ಯಾವದೂ ಅಸಮಾಧಾನ ಇಲ್ಲ, ಬಣಗಳು ಇಲ್ಲ ಎಂದು ಲಾಡ್ ಹೇಳಿದ್ದಾರೆ.
ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಭಿನ್ನಮತ ವಿಚಾರದ ಬಗ್ಗೆ ಲಾಡ್ ಪ್ರತಿಕ್ರಿಯಿಸಿದ್ದು, ಆ ತರಹ ನನಗೇನೂ ಅನ್ನಿಸ್ತಾ ಇಲ್ಲ. ಯಾವುದೇ ಅನುದಾನದೂ ಕೊರತೆಯೂ ಇಲ್ಲ. ಹಿಂದಿ ಮಾತಾಡೋ ಪ್ರದೇಶದಲ್ಲಿ ನಮ್ಮ ಮೈತ್ರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ..
ದೋಷಯುಕ್ತ ಇವಿ ವಾಹನ ಹೊಸ ಬೈಕ್ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ
ಮಾದರಿಯಾದ ಸಚಿವ ಸಂತೋಷ್ ಲಾಡ್ ನಡೆ: ಹೊಸ ಸರ್ಕಾರಿ ಕಾರು ಬೇಡ ಎಂದ ಮಂತ್ರಿ