Wednesday, August 20, 2025

Latest Posts

ವಿಜ್ಞಾನದ ಪ್ರಕಾರ ರಾತ್ರಿ 12ರ ಬಳಿಕ ಮಲಗುವವರಿಗೆ ಈ 6 ಸಮಸ್ಯೆಗಳು ಕಾಡುತ್ತದೆಯಂತೆ..

- Advertisement -

Health Tips: ಮುಂಚೆ ಎಲ್ಲಾ ಬೇಗ ಮಲಗಿ, ಬೇಗ ಏಳುವ ಅಭ್ಯಾಸವಿತ್ತು. ರಾತ್ರಿ 9ಕ್ಕೆಂದರೆ, ಎಲ್ಲರೂ ಮಲಗಿ ಬೆಳಿಗ್ಗೆ 5ಕ್ಕೆ ಏಳುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾ ಯುಗ. Facebook, Instagram, Youtube ಆನ್ ಮಾಡಿ ನೋಡೋಕ್ಕೆ ಶುರು ಮಾಡಿದ್ರೆ, ರಾತ್ರಿ 12 ಆದರೂ ಗಮನವೇ ಇರುವುದಿಲ್ಲ. ನಿದ್ರೆ ಆವರಿಸಿದಾಗಲೇ, ಸಮಯ ತಿಳಿಯೋದು. ಆದರೆ ವಿಜ್ಞಾನದ ಪ್ರಕಾರ, ರಾತ್ರಿ 12ರ ಬಳಿಕ ಯಾರು ಮಲಗುತ್ತಾರೋ, ಅವರಿಗೆ 6 ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾದ್ರೆ ಯಾವುದು ಆ 6 ಸಮಸ್ಯೆ ಅಂತಾ ತಿಳಿಯೋಣ ಬನ್ನಿ..

ರಾತ್ರಿ ತಡವಾಗಿ ಮಲಗುವುದರಿಂದ ಡಿಪ್ರೆಶನ್ ಆಗುತ್ತದೆ. ರಾತ್ರಿ ತಡವಾಗಿ ಮಲಗುವುದರಿಂದ ನಾವು ಬಹುಬೇಗ ಡಿಪ್ರೆಶನ್‌ಗೆ ಹೋಗುತ್ತೇವೆ. ಎಲ್ಲಾ ಮಾತುಗಳನ್ನು ತಪ್ಪಾಗಿ ಅರ್ಥೈಸಿಕ“ಳ್ಳುತ್ತೇವೆ. ಬುದ್ಧಿ ಕೇಳಿದರೂ ಅಳು ಬಂದಂತಾಗುತ್ತದೆ. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ.

ಏಕಾಗೃತೆ ತಪ್ಪುತ್ತದೆ: ರಾತ್ರಿ ತಡವಾಗಿ ಮಲಗುವುದರಿಂದ ಏಕಾಗೃತೆ ತಪ್ಪುತ್ತದೆ. ನಾವು ಮಾಡುವ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಓದಿನ ಮೇಲಾಗಲಿ, ಕೆಲಸದ ಮೇಲಾಗಲಿ, ನಿಗಾಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾಾವು ಸಕ್ಸಸ್ ಆಗಲು ಸಾಧ್ಯವಿಲ್ಲ.

ಕೋಪ ಹೆಚ್ಚುತ್ತದೆ: ನಮ್ಮ ನಡುವಳಿಕೆಯಲ್ಲಿ ಚೇಂಜ್ ಆಗುತ್ತದೆ: ತಡವಾಗಿ ಮಲಗುವುದರಿಂದ ಕೋಪ ಹೆಚ್ಚಾಗುತ್ತದೆ. ಏಕೆಂದರೆ, ತಡವಾಗಿ ಮಲಗುವುದರಿಂದ ನಮ್ಮ ಮಾತಿನ ಮೇಲೆ ನಮಗೆ ನಿಗಾ ಇರುವುದಿಲ್ಲ. ಏಕೆಂದರೆ, ನಮ್ಮ ಜೀವನದಲ್ಲಿ ಶಿಸ್ತು ತಪ್ಪಿರುತ್ತದೆ. ಹಾಗಾಗಿ ನಮ್ಮ ನಡುವಳಿಕೆಯಲ್ಲಿ ಚೇಂಜ್ ಆಗುತ್ತದೆ.

ಡಿಸಿಶನ್ ಮೇಕಿಂಗ್ ಪವರ್ ಕ್ಷೀಣಿಸುತ್ತದೆ: ಸರಿಯಾಗಿ ನಿದ್ದೆಯಾಗದಿದ್ದಲ್ಲಿ, ನಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆಗ ನಮ್ಮಲ್ಲಿನ ಡಿಸಿಶನ್ ಮೇಕಿಂಗ್ ಪವರ್ ಅಂದ್ರೆ ನಿರ್ಧಾರ ತೆಗೆದುಕ“ಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಬುದ್ಧಿಶಕ್ತಿಯೂ ಕ್ಷೀಣಿಸುತ್ತದೆ.

ಆಲಸ್ಯ: ಅಲ್ಲದೇ ನೀವು ರಾತ್ರಿ ತಡವಾಗಿ ಮಲಗಿದಾಗ, ಬೆಳಿಗ್ಗೆ ಎದ್ದಾಗಲೂ ನಿಮಗೆ ಫ್ರೆಶ್‌ ಎನ್ನಿಸುವುದಿಲ್ಲ. ಬದಲಾಗಿ ನೀವು ಇಡೀ ದಿನ ಆಲಸ್ಯಭರಿತರಾಗಿಯೇ ಇರುತ್ತೀರಿ. ಯಾವ ಕೆಲಸ ಮಾಡಲೂ ನಿಮಗೆ ಮನಸ್ಸಾಗುವುದಿಲ್ಲ.

ಇನ್ನು ರಾತ್ರಿ ತಡವಾಗಿ ಮಲಗುವುದರಿಂದ ನೆನಪಿನ ಶಕ್ತಿ ಕ್ಷೀಣಿಸುತ್ತದೆ: ಯಾರು ರಾತ್ರಿ ತಡವಾಗಿ ಮಲಗುತ್ತಾರೋ, ಅವರಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಸಣ್ಣ ಸಣ್ಣ ವಿಷಯವನ್ನೂ ಅವರು ಮರೆಯುತ್ತಾರೆ.

- Advertisement -

Latest Posts

Don't Miss