ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ: ನೊಣವಿನಕೆರೆಯ ಸ್ವಾಮೀಜಿ

Tumakuru News: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದ ಬೆನ್ನಲ್ಲೇ ಡಿಕೆಶಿ ಕೂಡ ದೆಹಲಿಗೆ ಹೋಗಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಇನ್ನೂ ಕನ್ಫರ್ಮ್ ಆಗಿರದ ಕಾರಣ, ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಸಿಎಂ ಅಂತಾ ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೈಕಮಾಂಡ್ ಮುಂದಿನ ಸಿಎಂ ಯಾರು ಅಂತಾ ಘೋಷಣೆ ಮಾಡುವವರೆಗೂ ನಾವೆಲ್ಲ ಕಾಯಲೇಬೇಕಾಗಿದೆ.

ಇನ್ನು ತುಮಕೂರಿನಲ್ಲಿ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ಶಿವಯೋಗಿಶ್ವರ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದು, ಶ್ರೀಮಠದ ಆಶೀರ್ವಾದ ಡಿಕೆ ಶಿವಕುಮಾರ ಅವರಿಗೆ ಇರುತ್ತದೆ. ರಾಜಾ‌ ಪ್ರತ್ಯಾಕ್ಷ ದೇವತಾ…ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ಬಡವರ ಪರ ಇರುವ ನಾಯಕನಾಗಿ ಹೊರಹೊಮ್ಮುತ್ತಾರೆ. ಶ್ರೀ ‌ಮಠದ ಧರ್ಮದ ಧ್ವಜವನ್ನು ಕೊಟ್ಟು ಅವರಿಗೆ ಆಶೀರ್ವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆಶೀರ್ವಾದ ಮಾಡುತ್ತೇನೆ ಎಂದಿದ್ದಾರೆ.

ಪ್ರಮಾಣವಚನದ ಸಮಯ ನಾವು ಹೇಳಲು ಆಗಲ್ಲ. ಅವರವರ ನಿರ್ಧಾರಕ್ಕೆ ಬಿಟ್ಟಿದ್ದು. ಅದಕ್ಕೆನಾನು ಅವರ ಪ್ರಮಾಣಚನ ಆಗುವವರೆಗೂ ನಾನು ಮಾತಾನಾಡಬಾರದು ಅಂತಾ ಇದ್ದೆ. ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಸಾಧಕನಾಗಿದ್ದಾರೆ. ಮುಂದೆ ಅವರಿಗೆ ಒಳ್ಳೆಯದಾಗಲಿ ಡಿಕೆಶಿಗೆ ಶುಭವಾಗಲಿ. ಎರಡು ವರ್ಷ ಅವರು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ಜನಸೇವೆ ಮಾಡುವ ಸದ್ಬುದ್ದಿ ಕೊಡಲಿ, ಧರ್ಮದ ಧ್ವಜಾವರಿಗೆ ಕೊಟ್ಟಿದ್ದೇವೆ. ಅವರು ಇವತ್ತು ಮಠಕ್ಕೆ ಬರುವ ಬಗ್ಗೆ ಮಾಹಿತಿ ಇಲ್ಲ. ಡಿಕೆಶಿ ಅವರಿಗೆ ಫಲ ಸಿಗುತ್ತೆ ಅನ್ನೊ ವಿಶ್ವಾಸ ಇದೆ ಎಂದು ಸ್ವಾಮೀಜಿ ಹೇಳಿದ್ದಾರೆ.

About The Author