Wednesday, June 12, 2024

Latest Posts

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

- Advertisement -

Political News: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು, ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್, ನೇಣಿಗೆ ಶರಣಾಗಿದ್ದಾರೆ. ಇಷ್ಟೇ ಅಲ್ಲದೇ, ಸಚಿವ ನಾಗೇಂದ್ರ ಅವರ ಹೆಸರನ್ನು ಸಹ ಬರೆದಿಟ್ಟಿದ್ದಾರೆ. ಹಾಗಾಗಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಬಿಜೆಪಿ ಆಗ್ರಹಿಸಿದೆ.

ಕರ್ನಾಟಕವನ್ನು ಲೂಟಿ ಮಾಡುವುದಕ್ಕೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಲೂಟಿ ಜತೆಗೆ ಅಧಿಕಾರಿಗಳ ಜೀವವನ್ನು ಬಲಿ ಪಡೆಯುತ್ತಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ನಡೆದ ₹187.33 ಕೋಟಿ ಹಗರಣ ಸಂಬಂಧ ಸಚಿವ ನಾಗೇಂದ್ರ ಅವರು ಸೇರಿದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳ ಹೆಸರು ಬರೆದಿಟ್ಟು ಅಕೌಂಟೆಂಟ್ ಸೂಪರಿಡೆಂಟ್ ಚಂದ್ರಶೇಖರ್ ನೇಣಿಗೆ ಶರಣಾಗಿದ್ದಾರೆ. ಹಗರಣದ ಪ್ರಮುಖ ಆರೋಪಿ ಸಚಿವ ಬಿ. ನಾಗೇಂದ್ರ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಸಿದ್ದರಾಮಯ್ಯ ಅವರು ಕೂಡಲೇ ಕಳಂಕಿತ ಸಚಿವರನ್ನು ಸಂಪುಟದಿಂದ ವಜಾಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಟೆರರಿಸ್ಟ್‌, ಕಲ್ಲು ತೂರಾಟ ಮಾಡುವವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗವಿಲ್ಲ: ಅಮಿತ್ ಶಾ

Israel war: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮಕ್ಕಳು ಸೇರಿ 35 ಮಂದಿ ಸಾವು

Israel war: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮಕ್ಕಳು ಸೇರಿ 35 ಮಂದಿ ಸಾವು

- Advertisement -

Latest Posts

Don't Miss