Friday, November 22, 2024

Latest Posts

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

- Advertisement -

Hunasuru: ಹುಣಸೂರು: ಕರ್ತವ್ಯ ನಿರತ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹುಣಸೂರು ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ಮೂರ್ತಿರಾವ್ ಪುತ್ರ ಅರವಿಂದ್ ಬಂಧಿತ ಆರೋಪಿ.

ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ಬಂದಿದ್ದ ಅರವಿಂದ ನೋ ಪಾರ್ಕಿಗ್ ಸ್ಥಳದಲ್ಲಿ ತನ್ನ ಬೈಕ್ ನಿಲ್ಲಿಸಿದ್ದಾನೆ. ಇದನ್ನು ಕಂಡ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಅವಿನಾಶ್ ಎಂಬುವವರು ನೋಪಾರ್ಕಿಗ್ ನಲ್ಲಿ ಬೈಕ್ ನಿಲ್ಲಿಸದಂತೆ ಸೂಚಿಸಿದ್ದರೂ, ಮದ್ಯಸೇವಿಸಿದ್ದ ಅವರಿಂದ ಹೋಂಗಾರ್ಡ್ ಜೊತೆ ವಾಗ್ಯುದ್ದಕ್ಕಿಳಿದು, ಮಾತಿಗೆ ಮಾತು ಬೆಳೆದು, ಹೋಂಗಾರ್ಡ್ ಕಾಲರ್ ಹಿಡಿದು ಏನು ಮಾಡುತ್ತೀಯಾ, ನಾನು ಅಲ್ಲೇ ಬೈಕ್ ನಿಲ್ಲಿಸೋದು ಎಂದು ಅವಾಜ್ ಹಾಕಿದ್ದಾನೆ.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಅರವಿಂದನಿಗೆ ತಿಳಿಹೇಳಿದರೂ ಸಹ ಹೋಂಗಾರ್ಡ್ ಅವಿನಾಶ್‌ರ ಶರ್ಟ್ ಹರಿದು ಹಾಕಿ ವಿಕೃತಿ ಮೆರೆದಿದ್ದು, ವಿಕೋಪಕ್ಕೆ ಹೋಗುವುದನ್ನರಿತ ನಿಲ್ದಾಣದ ಉಸ್ತುವಾರಿ ಅಧಿಕಾರಿಗಳು ತಕ್ಷಣವೇ 112ಗೆ ಕರೆಮಾಡಿದ ಮೇರೆಗೆ ಪೊಲೀಸರು ಆಗಮಿಸಿದ್ದಾರೆ. ಇಷ್ಟಾದರೂ ಅರವಿಂದ್‌ಗೆ ಮದ್ಯದ ಅಮಲು ಇಳಿದಿರಲಿಲ್ಲ. ಕೊನೆಗೆ ಇನ್ಸ್ಪೆಕ್ಟರ್ ದೇವೇಂದ್ರ ಆಗಮಿಸಿ ಆರೋಪಿ ಅರವಿಂದನನ್ನು ಬಂಧಿಸಿದ್ದಾರೆ.

ವಾರದ ಹಿಂದಷ್ಟೆ ನಿಲ್ದಾಣದಲ್ಲಿ ಬೈಕ್‌ನಲ್ಲಿ ಬಂದಿದ್ದ ಯುವಕನೊರ್ವನ ಮೇಲೆ ಬಸ್ ಹರಿದು ಯುವಕನ ಕಾಲು ತುಂಡಾಗಿತ್ತು. ಇದರಿಂದ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ನಿರ್ಭಂಧ ಹೇರಿರುವ ಫಲಕ ಅಳವಡಿಸಿದ್ದರೂ ನಿಲ್ದಾಣದಲ್ಲಿ ಪುಂಡ ಯುವಕರ ಹಾವಳಿ ಹೆಚ್ಚಿದ್ದು, ಪೊಲೀಸರು ನಿಯಂತ್ರಿಸಬೇಕೆಂದು ಮದಕರಿನಾಯಕರ ಯುವ ವೇದಿಕೆ ಅಧ್ಯಕ್ಷ ಮಯೂರ ಆಗ್ರಹಿಸಿದ್ದಾರೆ.

‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು

Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

- Advertisement -

Latest Posts

Don't Miss