- Advertisement -
Hubli News: ಹುಬ್ಬಳ್ಳಿ : ಹೊಲದಲ್ಲಿ ಕುರಿ ಮೇಯಿಸಿದ ಎಂದು ಆರೋಪಿಸಿ ವ್ಯಕ್ತಿಯೋರ್ವ ಇಬ್ಬರು ಸಂಚಾರಿ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ.
ಕೀರೆಸೂರು ಗ್ರಾಮದ ವೇಕಟೇಶ್ ಸೋಮನಗೌಡ್ರು ಎನ್ನುವ ವ್ಯಕ್ತಿಯೇ ಹಲ್ಲೆ ಮಾಡಿರುವುದಾಗಿ ರೈತ ಹೋರಾಟಗಾರರು ಮಾಹಿತಿ ನೀಡಿದ್ದಾರೆ. ಹಲ್ಲೆ ಮಾಡಿರುವ ವ್ಯಕ್ತಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಕುರುಬ ಸಮಾಜದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಚಾರಿ ಕುರುಬರು ಯಾವುದೇ ಥರಹದ ಹಾನಿ ಮಾಡಿಲ್ಲ, ಆದರೂ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಕುರುಬ ಹಿತರಕ್ಷಣಾ ಸಮಿತಿಯವರು ಹಾಗೂ ಕಾಂಗ್ರೆಸ್ ಮುಖಂಡರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅಲ್ಲದೇ, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
- Advertisement -