Monday, April 14, 2025

Latest Posts

ಕೋರ್ಟ್ ಆವರಣದಲ್ಲೇ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪತಿ..

- Advertisement -

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ನಮ್ಮ ಹಿರಿಯರು ಹೇಳಿದ ಗಾದೆ ಮಾತು. ಅದರಂತೆ, ಅಂದಿನವರು ಎಷ್ಟೇ ಕೋಪ, ಮುನಿಸಿದ್ದರು ಅಡ್ಜಸ್ಟ್ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ ಇಂದಿನ ಯುವ ಪೀಳಿಗೆಯವರಿಗೆ ಮೂಗಿನ ಮೇಲೆಯೇ ಕೋಪ. ಹಾಗಾಗಿ ಇಂದು ಆ ಗಾದೆ ಮಾತು, ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರುವ ತನಕ ಎಂದಾಗಿದೆ.

ಅದೇ ರೀತಿ ಕೋರ್ಟ್ ಮೆಟ್ಟಿಲೇರಿ ಹೋದ ಜೋಡಿಯಲ್ಲಿ ಕ್ರೂರಿ ಪತಿ, ತನ್ನ ಪತ್ನಿ ಮುಖದ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಚಿತ್ರಾ ಮತ್ತು ಶಿವಕುಮಾರ್ ಪತಿ ಪತ್ನಿಯಾಗಿದ್ದು, ಶಿವಕುಮಾರ್ ವಿರುದ್ಧ ಚಿತ್ರಾ ಪ್ರಕರಣ ದಾಖಲಿಸಿದ್ದಳು. ಹಾಗಾಗಿ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಮೊದಲ ದಿನವೇ, ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತಂದು. ಸಡೆನ್ ಆಗಿ ಬಂದು ಚಿತ್ರಾ ಮುಖದ ಮೇಲೆ ಎರೆಚಿದ್ದಾನೆ.

ಸ್ಥಳದಲ್ಲಿದ್ದ ಜನ, ಶಿವಕುಮಾರ್ ಮಾಡಿದ ಕ್ರೂರ ಕೃತ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ನಾಲ್ಕು ಧರ್ಮದೇಟು ಕೊಟ್ಟಿದ್ದಾರೆ. ನಂತರ ಪೊಲೀಸರು ಆರೋಪಿ ಶಿವಕುಮಾರ್‌ನನ್ನು ಎಳೆದು ಜೈಲಿಗೆ ಹಾಕಿದ್ದಾರೆ.

ಬೂಟಿನಡಿ ಸಿಲುಕಿ 4 ದಿವಸದ ನವಜಾತ ಶಿಶು ಸಾವು..?

47ನೇ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಯ ತಾಯಿ..

‘ನನ್ನ ಬಗ್ಗೆ ಕೇಳಿದ್ರೆ ಹೇಳ್ತೀನಿ.. ಆದ್ರೆ ಈ ವಿಚಾರದ ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕ ವ್ಯಕ್ತಿ..’

- Advertisement -

Latest Posts

Don't Miss