- Advertisement -
www.karnatakatv.net: ಸಾಹಿತಿ ಜಾವೇದ್ ಆಖ್ತರ್ ತಮ್ಮ ಮೇಲೆ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಇನ್ನು ಸೆ.14ರಂದು ವಿಚಾರಣೆಗೆ ಹಾಜರಾಗುವಂತೆಯೂ ಹೈಕೋರ್ಟ್ ಸಮನ್ಸ್ ನೀಡಿದೆ. ಅಲ್ಲದೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ವಾರಂಟ್ ಜಾರಿಗೊಳಿಸೋದಾಗಿಯೂ ಹೈಕೋರ್ಟ್ ಕಂಗನಾಗೆ ಎಚ್ಚರಿಕೆ ನೀಡಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದಲ್ಲಿ ನನ್ನ ಹೆಸರನ್ನು ಕಂಗನಾ ರಣಾವತ್ ಸುಖಾಸುಮ್ಮನೆ ಎಳೆದುತರೋ ಮೂಲಕ ನನ್ನ ತೇಜೋವಧೆ ಮಾಡ್ತಿದ್ದಾರೆ ಅಂತ ಕಳೆದ ನವೆಂಬರ್ ನಲ್ಲಿ ಜಾವೇದ್ ಅಖ್ತರ್ ದೂರು ದಾಖಲಿಸಿದ್ರು.
ಕರ್ನಾಟಕ ಟಿವಿ- ಬೆಂಗಳೂರು
- Advertisement -