Hubli News: ಹುಬ್ಬಳ್ಳಿ: ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಬಿಜೆಪಿ ಶಿಸ್ತು ಪಾಲನಾ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆಯೆ ನಾನು ಹೇಳಿದ್ದೆ. ಬಿಜೆಪಿಯಲ್ಲಿ ಇತ್ತೀಚಿಗೆ ಅಶಿಸ್ತಿನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಕಾರ್ಯಕರ್ತರು ಸಾಕಷ್ಟು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಕೇಂದ್ರ ಸಮಿತಿಗೆ ವರದಿ ಕಳುಹಿಸಲಾಯಿಗಿತ್ತು. ವರಿಷ್ಠರು ನಮ್ಮ ಜೊತೆಗೆ ಚರ್ಚೆ ಮಾಡಿದ್ದರು. ಎಲ್ಲರೂ ಕೂಡಿ ಹೋಗುವಂತಹ ತೀರ್ಮಾನ ಹೈಕಮಾಂಡ್ ನೀಡಿದೆ ಎಂದು ಹೇಳಿದ್ದಾರೆ.
ಅಲ್ಲದೇ, ನಮಗೆ ದೇಶ ಮೊದಲು ಬಳಿಕ ಪಕ್ಷ, ತದನಂತರ ವ್ಯಕ್ತಿ. ಪಕ್ಷದ ನಾಯಕರ ಬಗ್ಗೆ, ವರಿಷ್ಠರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸಹಿಸಲು ಆಗಲ್ಲ. ಸಹಕಾರದಿಂದ ಹೋದ್ರೆ ಎಲ್ಲರಿಗೂ ಒಳ್ಳೆಯದು. ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ ಬಗ್ಗೆ ವರದಿ ಕಳುಹಿಸಲಾಗಿದೆ. ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ ಇದು ಕೊನೆಯ ನೋಟಿಸ್. ಆದಷ್ಟು ಬೇಗ ಅವರ ಮೇಲೂ ಕ್ರಮವಾಗುತ್ತೆ ಎಂದು ಬಿಜೆಪಿ ಶಿಸ್ತು ಪಾಲನಾ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ್ ಪಾಟೀಲ್ ಹೇಳಿದ್ದಾರೆ.