Sandalwood: ಸದ್ಯ ಭಾರತೀಯ ಚಿತ್ರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕನ್ನಡದ ಕಾಂತಾರ- ಭಾಗ 1. ರಿಲೀಸ್ ಆದ 2 ದಿನಕ್ಕೆ 200 ಕೋಟಿ ಗಳಿಕೆ ಕಂಡಿರುವ ಕಾಂತಾರ ತನ್ನ ಓಟ ಇನ್ನೂ ಮುಂದುವರೆಸಿದೆ. ಜನ ಬೇಗ ಟಿಕೇಟ್ ಸಿಕ್ರೆ ಸಾಕಪ್ಪಾ ಅಂತಾ ಕಾಯ್‌ತಾ ಇದ್ದಾರೆ. ಹೀಗೆ ತಮ್ಮ ಸಿನಿಮಾ ಸಕ್ಸಸ್ ಕಂಡ ಬೆನ್ನಲ್ಲೇ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ.
ಮುಂಬೈನ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನ ಭಾರತದ ಪವರ್‌ಫುಲ್ ದೇವಸ್ಥಾನಗಳಲ್ಲಿ 1. ಬಾಲಿವುಡ್ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು, ಸಿನಿಮಾ ರಿಲೀಸ್ ಆಗುವ ಮುನ್ನ, ಚುನಾವಣೆಗೂ ಮುನ್ನ ಈ ಕ್ಷೇತ್ರಕ್ಕೆ ಬಂದು ದರ್ಶನ ಮಾಡಿ, ಪೂಜೆ ಸಲ್ಲಿಸಿ ಹೋಗುತ್ತಾರೆ. ವಿದೇಶಿ ಸೆಲೆಬ್ರಿಟಿಗಳು, ಕ್ರಿಕೇಟಿಗರು, ಗಣ್ಯರು ಕೂಡ ಸಿದ್ಧಿ ವಿನಾಯಕನ ದರ್ಶನಕ್ಕೆ ಬರುತ್ತಾರೆ.
ಇದೀಗ ರಿಷಬ್ ಕೂಡ ಸಿದ್ಧಿ ವಿನಾಯಕನ ದರ್ಶನ ಮಾಡಿ, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ಅಲ್ಲಿ ಬಂದಿದ್ದ ಅಭಿಮಾನಿಗಳ ಬಳಿ ಖುಷಿಯಿಂದ ಕೈ ಬೀಸಿದ್ದಾರೆ. ಸೆಲ್ಫಿಗೆ ಪೋಸ್ ನೀಡಿದ್ದಾರೆ. ಇದೇ ಅಕ್ಟೋಬರ್ 2ರಂದು ಕಾಂತಾರ 7 ಭಾಷೆಗಳಲ್ಲಿ ರಿಲೀಸ್ ಆಗಿದೆ. ವಿದೇಶಗಳಲ್ಲೂ ತೆರೆಕಂಡಿದೆ.