ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಆರೋಪ ಹಿನ್ನೆಲೆ ಶಾಸಕ ಅರವಿಂದ್ ಬೆಲ್ಲದ ವಿರುದ್ಧ ಕಾರ್ಯಕ್ರಮ ಆಯೋಜಕ ನಾಗರಾಜ್ ಗೌರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಟಿವಿಗೆ ನೀಡಿದ ಹೇಳಿಕೆಯಲ್ಲಿ, ಅರವಿಂದ್ ಬೆಲ್ಲದ ಅವರು ಆಫ್ ನಾಲೇಜ್ ಶಾಸಕರು ಇಷ್ಟು ದಿನ ಜನರು ಅವರನ್ನು ಗುದ್ದಲಿ ಪೂಜೆ, ಅಧಿಕಾರಿಗಳನ್ನ ಬ್ಲಾಕ್‌ಮೇಲ್ ಮಾಡುವ ಶಾಸಕರು ಎನ್ನುತ್ತಿದ್ದರು.
ಈಗ ಅವರು ‘ವಿಜಿಟಿಂಗ್’ ಹಾಗೂ ‘ಪ್ರಚಾರ ಪ್ರಿಯ’ ಶಾಸಕರಾಗಿ ಬದಲಾಗಿದ್ದಾರೆ ಎಂದು ಟೀಕಿಸಿದರು. ಈ ಕಾರ್ಯಕ್ರಮ ಯಾವುದೇ ಸರ್ಕಾರಿ ಕಾರ್ಯಕ್ರಮ ಅಲ್ಲಾ. ನಮ್ಮ ಕಚೇರಿ ಉದ್ಘಾಟನೆ ಮತ್ತು ಅನುದಾನ ಕೊಟ್ಟ ಶಾಸಕರಿಗೆ, ಸಚಿವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಮೊದಲಿಗೆ ವಿಘ್ನೇಶ್ವರನ ಮಂತ್ರ ಮೊದಲು ಪಠಣ ಮಾಡಲಾಗಿದೆ. ಬಳಿಕ ಕುರಾನ್ ಪಠಣ ಮಾಡಲಾಗಿದೆ.
ಇದರಲ್ಲಿ ಏನು ತಪ್ಪುಇದು ಗಾಂಧಿ ಭಾರತ. ಶಾಸಕ ಅರವಿಂದ್ ಬೆಲ್ಲದ ತಮ್ಮ ಎಷ್ಟು ಬೇಕೋ ಅಷ್ಟು ಮಾಹಿತಿ ಪಡೆದು, ಪ್ರಚಾರಕ್ಕೆ ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಈ ಘಟನೆಯಿಂದ ಜಿಲ್ಲೆಯಲ್ಲಿ ರಾಜಕೀಯ ಗುಡುಗು ಮೂಡಿದ್ದು, ಕುರಾನ್ ಪಠಣದ ಹೆಸರಲ್ಲಿ ಧರ್ಮ ಮತ್ತು ರಾಜಕಾರಣವನ್ನು ಮಿಶ್ರ ಮಾಡುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಮತ್ತೊಂದೆಡೆ, ಸಾರ್ವಜನಿಕ ಧಾರ್ಮಿಕ ಸಹಿಷ್ಣುತೆಯ ಕುರಿತ ಚರ್ಚೆಗೆ ಇದು ಪುನಃ ಬೆಳಕು ಚೆಲ್ಲಿದೆ.
ವರದಿ : ಲಾವಣ್ಯ ಅನಿಗೋಳ

