Wednesday, June 12, 2024

Latest Posts

ಅಪಘಾತದ ಸಮಯದಲ್ಲಿ ನಟಿ ಪವಿತ್ರಾ ಜಯರಾಮ್ ಜೊತೆ ಇದ್ದ ನಟ ಚಂದು ಆತ್ಮಹ*ತ್ಯೆಗೆ ಶರಣು

- Advertisement -

Movie News: ಕೆಲ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ನಿಧನರಾಗಿದ್ದು, ಅವರೊಂದಿಗೆ ಪ್ರಯಾಣಿಸುತ್ತಿದ್ದ ನಟ ಚಂದುವಿನ ಕೈಗೆ ಗಾಯವಾಗಿತ್ತು.

ಪವಿತ್ರಾ ಮತ್ತು ಚಂದು ಆಪ್ತರಾಗಿದ್ದು, ಅವರಿಬ್ಬರೂ ಎರಡನೇ ವಿವಾಹವಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ ಪವಿತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದರಿಂದ ಮನನೊಂದ ಚಂದು, ನಿನ್ನೆ ತಮ್ಮ ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪವಿತ್ರಾ ಸಾವಿನ ಬಳಿಕ ಮಂಡ್ಯದಲ್ಲಿ ಪವಿತ್ರಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಚಂದು, ಬಹಳ ನೊಂದಿದ್ದರು. ನಿನ್ನೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇಂದು ಪವಿತ್ರಾಳ ಬರ್ತ್‌ಡೇ ಎಂದು ಪೋಸ್ಟ್ ಹಾಕಿದ್ದ ಚಂದು, ಪವಿತ್ರಾರನ್ನು ಕುರಿತು, ಜಿಮ್‌ ಟ್ರೇನರ್‌ ಕರಿಯುತ್ತಿದ್ದಾರೆ. ಬೇಗ ಬಾ ಪವಿತ್ರ ಎಂದು ಪೋಸ್ಟ್ ಹಾಕಿದ್ದರು. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪವಿತ್ರಾ ಜಯರಾಮ್‌ಗೆ ಮದುವೆಯಾಗಿ ಆಕೆ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ. ಆದರೆ ಮೊದಲ ಮದುವೆ ಮುರಿದು ಬಿದ್ದು, ಚಂದುವನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇನ್ನು ಚಂದ್ರಕಾಂತ್‌ಗೆ ಕೂಡ ಶಿಲ್ಪಾ ಎಂಬುವರೊಂದಿಗೆ ವಿವಾಹವಾಗಿದ್ದು, ಅವರ ಮದುವೆ ಕೂಡ ಮುರಿದು ಬಿದ್ದಿದ್ದು, ಪವಿತ್ರಾರೊಂದಿಗೆ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತ್ಮಹತ್ಯೆಗೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ.

ಯೂಟ್ಯೂಬ್ ನೋಡಿ ಕ್ಯಾನ್ಸರ್ ರೋಗಕ್ಕೆ ಮನೆಮದ್ದು ಮಾಡಿ ಎಡವಟ್ಟು: ಮಹಿಳೆಯ ಸ್ಥಿತಿ ಚಿಂತಾಜನಕ

ಇನ್ನು ಮುಂದೆ ವಿಧಾನಸೌಧ ಪ್ರವೇಶಿಸಬೇಕು ಅಂದ್ರೆ ಕ್ಯೂ ಆರ್ ಕೋಡ್ ಪಾಸ್ ಇರಲೇಬೇಕು

ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’

- Advertisement -

Latest Posts

Don't Miss