ನಟ ಜಗ್ಗೇಶ್ ಕ್ಷಮೆ ಕೇಳದಿದ್ದಲ್ಲಿ ಮನೆಗೆ ಮುತ್ತಿಗೆ: ವರ್ತೂರು ಸಂತೋಷ್ ಪರ ಅಭಿಮಾನಿಗಳು

Movie News: ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ, ಬಿಗ್‌ಬಾಸ್‌ ಮನೆಗೆ ಹೋಗಿದ್ದು, ಅಲ್ಲಿ ಅವರಿಗೆ ಬಂಧಿಸಲಾಗಿತ್ತು. ಎರಡು ದಿನಗಳ ಬಳಿಕ, ಸಂತೋಷ್ ಹೊರಬಂದು, ಮತ್ತೆ ಬಿಗ್‌ಬಾಸ್ ಮನೆ ಸೇರಿದ್ದರು.

ಆದರೆ ಕೆಲ ದಿನಗಳ ಹಿಂದೆ ನಟ ಜಗ್ಗೇಶ್ ಕಾರ್ಯಕ್ರಮವೊಂದರಲ್ಲಿ, ತಾವು ಹುಲಿ ಉಗುರಿನ ಪೆಂಡೆಂಟ್ ಧರಿಸಿದಾಗ, ಅರಣ್ಣ ಇಲಾಖೆಯವರು ಬಂದು, ಅದನ್ನು ವಶಪಡಿಸಿಕೊಂಡು ಹೋಗಿದ್ದರು ಎಂದು ಆಕ್ರೋಶ ಹೊರಹಾಕಿದ್ದರು. ಅಲ್ಲದೇ, ಯಾವನೋ ಕಿತ್ ಹೋದ್ ನನ್ನ ಮಗ, ನಿಜವಾದ ಹುಲಿ ಉಗುರು ಧರಿಸಿ, ಟಿವಿಗೆ ಹೋಗಿ, ಅಲ್ಲಿ ತಗ್ಲಾಕೊಂಡ್ ಬಿಟ್ಟಾ ಎಂದು ಪರೋಕ್ಷವಾಗಿ, ವರ್ತೂರ್ ಸಂತೋಷ್ ಅವರನ್ನು ನಿಂದಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂತೋಷ್ ಕಾಲಾಯ ತಸ್ಮೈ ನಮಃ. ನಾನು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ನಾವು ಎಲ್ಲದಕ್ಕೂ ಮಾತನಾಡಲೇಬೇಕು ಅಂತಿಲ್ಲ. ಕೆಲವೊಮ್ಮೆ ಮೌನ ವಹಿಸುವುದು ಅನಿವಾರ್ಯವಾಗಿರುತ್ತದೆ. ನಾನು ಸುದೀಪಣ್ಣನ ಬಳಿ ಕೆಲ ವಿಷಯಗಳನ್ನು ಕಲಿತಿದ್ದೇನೆ. ಎಲ್ಲ ಬಾರಿಯೂ ನಾವು ಎಲ್ಲರ ಮಾತಿಗೂ ಪ್ರತಿಕ್ರಿಯಿಸಬೇಕಂತಿಲ್ಲ. ಕೆಲವೊಮ್ಮೆ ಮೌನವಾಗಿರುವುದು ಸೂಕ್ತವಾಗಿರುತ್ತದೆ ಎಂದಿದ್ದರು.

ಆದರೆ ವರ್ತೂರು ಸಂತೋಷ್ ಆಪ್ತರು, ಜಗ್ಗೇಶ್ ಈ ವಿಷಯಕ್ಕೆ ಸಂಬಂಧಿಸಿದಂತೆ  ಕ್ಷಮೆ ಕೇಳದಿದ್ದಲ್ಲಿ, ನಾವು ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಯಾವನೋ ಕಿತ್ ಹೋದ್ ನನ್‌ಮಗ ಎಂಬ ಪದ ಬಳಸಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ವರ್ತೂರು ಅಭಿಮಾನಿಗಳು ಆಗ್ರಹಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ನಟ ಜಗ್ಗೇಶ್ ನಿಂದನೆಗೆ ವರ್ತೂರು ಸಂತೋಷ್ ಹೇಳಿದ್ದೇನು..?

ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್

About The Author