Sunday, September 8, 2024

Latest Posts

ಮಗುವಿಗೆ “ವಿಕ್ರಾಂತ್” ಹೆಸರಿಟ್ಟ ಕಿಚ್ಚನ ಅಪ್ಪಟ ಅಭಿಮಾನಿ..!

- Advertisement -

ಮಗುವಿಗೆ “ವಿಕ್ರಾಂತ್” ಹೆಸರಿಟ್ಟ ಕಿಚ್ಚನ ಅಪ್ಪಟ ಅಭಿಮಾನಿ..!

ವಿಕ್ರಾಂತ್ ರೋಣ..ಈ ಹೆಸರಿನಲ್ಲೇ ಒಂದು ಗತ್ತಿದೆ. ಈ ಸಿನಿಮಾದಲ್ಲಿ ನಟಿಸಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ ಇದೆ. ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಪರಭಾಷೆಗಳಲ್ಲೂ ಸಖತ್ ಸೌಂಡ್ ಮಾಡ್ತಿರೋ ವಿಕ್ರಾಂತ್ ರೋಣನನ್ನ ಬಿಗ್ ಸ್ಕಿçÃನ್ ಮೇಲೆ ನೋಡೋದಕ್ಕೆ ಅಭಿಮಾನಿಗಳೆಲ್ಲರೂ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

ಅನೂಪ್ ಭಂಡಾರಿ ಡೈರೆಕ್ಷನ್, ಅಜನೀಶ್ ಲೋಕನಾಥ್ ಮ್ಯೂಸಿಕ್, ಕಿಚ್ಚ, ಜಾಕ್ವೆಲಿನ್ ರಕ್ಕಮ್ಮ ಸ್ಟೆಪ್ಪು, ಚಿತ್ರದ ಟ್ರೆöÊಲರ್, ಪೋಸ್ಟರ್, ರಾಜಕುಮಾರಿ ಹಾಡು, ಹೀಗೆ ಒಂದಾ ಎರಡಾ ಸಾಕಷ್ಟು ವಿಷಯಗಳಿಂದ ಚಿತ್ರ ಬಿಡುಗಡೆಗೂ ಮುನ್ನ ದಾಖಲೆ ಬರೆದಿರೋ ವಿಕ್ರಾಂತ್ ರೋಣ ಈಗ ಮತ್ತೊಂದು ಇಂಟ್ರೆಸ್ಟಿAಗ್ ಸುದ್ದಿಯನ್ನ ನಿಮಗೆ ಕೊಟ್ಟಿದ್ದಾರೆ.

ಹೌದು, ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ರೋಣನದ್ದೇ ಫುಲ್ ಕ್ರೇಜ್. ಇದರ ಬೆನ್ನಲ್ಲೇ ರಾಯಚೂರಿನ ಕಿಚ್ಚನ ಪಕ್ಕಾ ಅಭಿಮಾನಿಯಾಗಿರೋ ಮಹರ್ಷಿ ಎಂಬುವರ ಮಗುವಿಗೆ ವಿಕ್ರಾಂತ್ ಅಂತ ನಾಮಕರಣ ಮಾಡಿದ್ದಾರೆ. ಅಭಿಮಾನಿ ಮಹರ್ಷಿಯಿಂದ ಕಿಚ್ಚನಿಗೆ ಇದು ಸ್ಪೆಷಲ್ ಟ್ರಿಬ್ಯೂಟ್ ಆಗಿದೆ. ಒಟ್ಟಿನಲ್ಲಿ ಊರಲ್ಲಿ ಒಬ್ರದ್ದೇ ಹೆಸರು ಚಾಲ್ತಿಯಲ್ಲಿರೋದು, ಅವರೇ ವಿಕ್ರಾಂತ್ ರೋಣ ಅಂತಿದ್ದಾರೆ ಆಲ್ ಓವರ್ ಇಂಡಿಯಾ ಕಿಚ್ಚನ ಫ್ಯಾನ್ಸ್. ಇದೇ ಜುಲೈ-೨೮ರಂದು ವರ್ಲ್ಡ್ ವೈಡ್ ವಿಕ್ರಾಂತ್ ರೋಣ ಸಿನಿಮಾ ತೆರೆಕಾಣಲಿದೆ.

- Advertisement -

Latest Posts

Don't Miss