Thursday, February 13, 2025

Latest Posts

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕೆಜಿಎಫ್’ ಗರುಡ.!

- Advertisement -

ಕೆಜಿಎಫ್ ಸಿನಿಮಾ ಹೊಸ ದಾಖಲೆಯನ್ನ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟ, ನಟಿ ಅಷ್ಟೇ ಅಲ್ಲ ಈ ಸಿನಿಮಾದಲ್ಲಿರುವ ಬೇರೆ ಪಾತ್ರಧಾರಿಗಳಿಗೂ ಕೂಡ ಅವರ ವೃತ್ತಿಜೀವನಕ್ಕೆ ‘ಕೆಜಿಎಫ್’ ಸಿನಿಮಾ ದೊಡ್ಡ ಮೈಲೇಜ್ ಕೊಟ್ಟಿದೆ. ಈ ಸಿನಿಮಾದಲ್ಲಿ ಗರುಡ ಪಾತ್ರ ಮಾಡಿರುವ ನಟ ರಾಮಚಂದ್ರ ರಾಜು ಅವರಿಗಂತೂ ಸಿಕ್ಕಾಪಟ್ಟೆ ಫೇಮ್ ಸಿಕ್ಕಿದೆ.

‘ಕೆಜಿಎಫ್-2’ ಸಿನಿಮಾ ಮೂಲಕ ಗರುಡ ರಾಮ್ ಅವರಿಗೆ ಹಲವು ಅವಕಾಶಗಳು ಸಿಗಲು ಆರಂಭಿಸಿದವು. ಇದೀಗ ಅವರು ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಸಿನಿಮಾದ ಮೇಲೆ ಭಾರಿ ನೀರಿಕ್ಷೆ ಇದೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ ಆಗಲಿದ್ದು, ಗರುಡ ರಾಮ್ ಕೂಡ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಇಂದು ಗರುಡ ರಾಮ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಪ್ರಯುಕ್ತ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಕೂಡ ಶುಭ ಕೋರುತ್ತಿದ್ದಾರೆ.

 

- Advertisement -

Latest Posts

Don't Miss