ಕನ್ನಡದ ನಟ ಸತೀಶ್ ನೀನಾಸಂ (Sathish Ninasam) ಈ ಬಾರಿ ಮಕರ ಸಂಕ್ರಾoತಿಯ ಶುಭಾಶಯಗಳನ್ನು ವಿಶೇಷ ರೀತಿಯಲ್ಲಿ ಹೇಳಿಕೊಂಡಿದ್ದಾರೆ. ಅದರ ಜೊತೆಗೆ ತನ್ನ ವೈಯಕ್ತಿಕ ಜೀವನದ ಮತ್ತೊಂದು ಸಿಹಿಸುದ್ದಿಯನ್ನು ಸಹ ಹಂಚಿಕೊoಡಿದ್ದಾರೆ. ಆ ಖುಷಿಯ ವಿಚಾರವೇನೆಂದರೆ ಇದೇ ಮೊದಲ ಬಾರಿಗೆ ತಮ್ಮ ಪುತ್ರಿಯ ಪೋಟೋವನ್ನು ಸಾರ್ವಜನಿಕವಾಗಿ ಹಂಚಿಕೊoಡಿದ್ದಷ್ಟೇ ಅಲ್ಲದೇ, ಮಗಳ ಮುಖಾಂತರ ಸಂಕ್ರಾoತಿಯ ಶೂಭಾಶಯವನ್ನು ಕೋರಿದ್ದಾರೆ. ಅವರ ಪುತ್ರಿಗೆ ಐದು ವರ್ಷ, ಅವರು ಇದುವರೆಗೂ ತಮ್ಮ ಪುತ್ರಿಯ ಚಿತ್ರವನ್ನು ಎಲ್ಲಿಯೂ ಹಂಚಿಕೊoಡಿರಲಿಲ್ಲ ಇದೇ ಮೊದಲ ಬಾರಿಗೆ ಹಂಚಿಕೊoಡು ಹರುಷವನ್ನು ವ್ಯಕ್ತಪಡಿಸಿದ್ದಾರೆ. ಹಬ್ಬದ ದಿನ ಪೋಟೋ ಹಂಚಿಕೊoಡು ವಿವರಣೆಯನ್ನು ನೀಡಿದ್ದಾರೆ.
ನಿಮಗೆಲ್ಲ ಸಂಕ್ರಾoತಿಯ ಶುಭಾಶಯವನ್ನು ಕೋರುತ್ತಿದ್ದಾಳೆ ನನ್ನ ಮಗಳು"ಮನಸ್ವಿತ'. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಭಾವಚಿತ್ರ ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊoಡಿಲ್ಲ,
ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವoತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನoತೆ ಸದಾ ಇರಲಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.