Thursday, December 12, 2024

Latest Posts

ಅಯೋಧ್ಯೆಯಲ್ಲಿ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ನಟ ನಿಖಿಲ್ ಕುಮಾರ್

- Advertisement -

Movie News: ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಜೊತೆಗೆ, ನಟ, ಯುವ ರಾಜಕಾರಣಿ ನಿಖಿಲ್ ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಹಾಗಾಗಿ ನಿಖಿಲ್ ಅಯೋಧ್ಯೆಗೆ ಹೋಗಿ, ಸ್ರೀರಾಮನ ಸನ್ನಿಧಾನದಲ್ಲಿ, ಅಜ್ಜ-ಅಜ್ಜಿ, ಅಪ್ಪನ ಜೊತೆಗೆ ತಮ್ಮ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಯೋಧ್ಯೆಯಲ್ಲೇ ಕೇಕ್ ಕತ್ತರಿಸಿ, ಎಲ್ಲರಿಗೂ ತಿನ್ನಿಸಿ, ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದು ನನ್ನ ಪುಣ್ಯ. ಈ ಸಂತೋಷದ ಗಳಿಗೆಯಲ್ಲಿ ತಾತ ದೇವೇಗೌಡ ಅವರು ಮತ್ತು ಅಜ್ಜಿ ಚೆನ್ನಮ್ಮ ಅವರು ಹಾಗೂ ತಂದೆಯವರಾದ ಕುಮಾರಸ್ವಾಮಿ ಅವರು ಜೊತೆಯಲ್ಲಿದ್ದಿದ್ದು ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ಆ ಮಹಾಮಹಿಮನಾದ ಶ್ರೀ ರಾಮದೇವರು ಪ್ರತಿಯೊಬ್ಬರಿಗೂ ಶುಭವನ್ನು ಉಂಟು ಮಾಡಲಿ. ಎಲ್ಲರ ಮನೆ-ಮನಗಳಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವ ಈ ಪರಮಪುಣ್ಯ ಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಭಕ್ತಿಪೂರ್ವಕ ಶುಭಾಶಯಗಳು. ಈ ದೈವ ಕಾರ್ಯದಲ್ಲಿ ಭಾಗಿಯಾಗಿ ಆ ಭಗವಂತನನ್ನು ಕಣ್ತುಂಬಿಕೊಳ್ಳುವ ಅವಕಾಶವೂ ನನಗೆ ಧಕ್ಕಿದ್ದು ಶ್ರೀರಾಮ ಕೃಪೆ ಅಲ್ಲದೆ ಮತ್ತೇನೂ ಅಲ್ಲ ಎಂದು ಭಾವಿಸಿದ್ದೇನೆ ಎಂದು ನಿಖಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಯೋಧ್ಯೆಗೆ ಹೋದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಅವರಿಗೆ ಶುಭ ಕೋರಲಾಯಿತು. ಪೂಜ್ಯ ತಂದೆ-ತಾಯಿ ಅವರಿಬ್ಬರೂ ಅಯೋಧ್ಯೆಗೆ ಬಂದಿದ್ದಕ್ಕೆ ಯೋಗಿ ಜೀ ಅವರು ಸಂತಸ ವ್ಯಕ್ತಪಡಿಸಿದರು. ಮಾಜಿ ಸಂಸದರಾದ ಶ್ರೀ ಕುಪೇಂದ್ರ ರೆಡ್ಡಿ ಅವರು, ರಾಜ್ಯ ಯುವ ಜನತಾದಳದ ಅಧ್ಯಕ್ಷ ಶ್ರೀ ನಿಖಿಲ್ ಕುಮಾರ್ ಅವರು ಜತೆಯಲ್ಲಿದ್ದರು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ

‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’

ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ಸರಯೂ ದಡದಲ್ಲಿ ಗಂಗಾರತಿ

- Advertisement -

Latest Posts

Don't Miss