Movie News: ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಕಿರಿಯ ಮಗ ಓದುತ್ತಿದ್ದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ, ಮಗನಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪವನ್ ಕಲ್ಯಾಣ್ ಮೂರನೇ ಪತ್ನಿ ಮತ್ತು ಅವರ ಕಿರಿಯ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ನೆಲೆಸಿದ್ದು, ಮಗ ಸಿಂಗಾಪುರದಲ್ಲೇ ಶಾಲೆಗೆ ಹೋಗುತ್ತಾನೆ. ಅದೇ ಶಾಲೆಯಲ್ಲಿಂದು ಅಗ್ನಿ ಅವಘಡ ಸಂಭವಿಸಿ, ಮಾರ್ಕ್ ಶಂಕರ್ಗೆ ಗಾಯಗಳಾಗಿದೆ. ಸದ್ಯ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ದೌಡಾಯಿಸಿದ್ದು, ಪುತ್ರನೊಂದಿಗಿದ್ದಾರೆ.
ಮಾರ್ಕ್‌ಗೆ ಸುಟ್ಟ ಗಾಯಗಳಾಗಿದ್ದು, ಉಸಿರಾಟದ ಸಮಸ್ಯೆಯೂ ಉದ್ಭವಿಸಿತ್ತು. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಮಾರ್ಕ್‌ನನ್ನು ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆಂಧ್ರ ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್, ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಸಿಂಗಾಪುರಕ್ಕೆ ಹೋಗಿ, ಕುಟುಂಬದವರನ್ನು ಭೇಟಿಯಾಗಿ ಬರುತ್ತದೆ.