Bollywood News: ಇತ್ತೀಚೆಗೆ ಬಾಲಿವುಡ್ ದಂಪತಿ ಟ್ರೋಲ್ ಆಗುತ್ತಲೇ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಪತ್ನಿ ದೀಪಿಕಾ ಕೇಸರಿ ಬಿಕಿನಿ ತೊಟ್ಟು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ್ರೆ, ಇನ್ನೊಂದೆಡೆ ಪತಿ ರಣ್ವೀರ್ ಸಿಂಗ್ ಕೂಡ ಟ್ರೋಲ್ ಆಗುತ್ತ ಸದ್ದು ಮಾಡುತ್ತಿದ್ದಾರೆ.
ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿಸಿ, ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ರಣ್ವೀರ್, ಹಿಂದಿ ನ್ಯೂಸ್‌ಗಳ ಪರ ವಿರೋಧ ಚರ್ಚೆಗೆ ಆಹಾರವಾಗಿದ್ದರು. ಇದೀಗ ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ಆ್ಯಡ್ ಒಂದರಲ್ಲಿ ಅಭಿನಯಿಸಿ, ಟ್ರೋಲ್‌ಗೆ ಒಳಗಾಗಿದ್ದಾರೆ.
ಬೋಲ್ಡ್ ಕೇರ್ ಎಂಬ ಲೈಂಗಿಕ ಶಕ್ತಿ ಹೆಚ್ಚಿಸುವ ಮಾತ್ರೆಯ ಆ್ಯಡ್‌ನಲ್ಲಿ ರಣ್ವೀರ್ ಜಾನಿ ಜೊತೆ ನಟಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಿಂದಿ ಸಿರಿಯಲ್ ರೀತಿ ಈ ಆ್ಯಡ್ ಶೂಟ್ ಮಾಡಿದ್ದು, ಪತ್ನಿ ಪತಿ ಜಾನಿ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಹೋಗಲು ರೆಡಿಯಾಗಿರುತ್ತಾಳೆ. ಆಗ ರಣ್ವೀರ್ ಸಿಂಗ್ ಮನೆ ಬಿಟ್ಟು ಹೋಗಲು ಕಾರಣವೇನು ಎಂದು ಕೇಳುತ್ತಾನೆ.
ಆಗ ಆಕೆ, ಪತಿಯ ಲೈಂಗಿಕ ಸಾಮರ್ಥ್ಯ ಸರಿಯಾಗಿಲ್ಲ, ನಾನು ಎಷ್ಟೋ ಬಾರಿ ಅವರಿಗೆ ಬೋಲ್ಡ್ ಕೇರ್ ತೆಗೆದುಕೊಳ್ಳಲು ಹೇಳಿದ್ದೆ. ಆದರೆ ಅವರು ನನ್ನ ಮಾತೇ ಕೇಳಲಿಲ್ಲ ಎನ್ನುವಾಗಲೇ, ಆಕೆಯ ಅತ್ತೆ, ಆಕೆಯ ಕೆನ್ನೆಗೆ ಹೊಡೆಯುತ್ತಾರೆ. ಆಕೆ ಆಯತಪ್ಪಿ ಮೇಲಿನಿಂದ ಕೆಳಗೆ ಬೀಳುವಂತಾಗುತ್ತಾಳೆ. ಆಗ ರಣ್ವೀರ್ ಲೈಂಗಿಕ ಮಾತ್ರೆಯನ್ನು ಜಾನಿಗೆ ನೀಡುತ್ತಾನೆ.
ಜಾನಿ ಆ ಮಾತ್ರೆ ನುಂಗಿ, ಬೀಳುತ್ತಿದ್ದ ಪತ್ನಿಯನ್ನು ಹಿಡಿದು, ಆಕೆಗೆ ಖುಷಿ ಪಡಿಸುತ್ತಾನೆ. ಇದು ಆ್ಯಡ್. ಇದಾದ ಬಳಿಕ ರಣ್ವೀರ್, ಪುರುಷರ ಲೈಂಗಿಕ ಸಮಸ್ಯೆಗೆ ಬೋಲ್ಡ್ ಕೇರ್ ಪರಿಹಾರವೆಂದು ಹೇಳುತ್ತಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಶೇರ್ ಮಾಡಿದ್ದಾರೆ. ವಿಧ ವಿಧವಾಗಿ ಕಾಮೆಂಟ್ ಮಾಡಿದ್ದಾರೆ.
Pornstar Johnny Sins as Jawan Singh 🤣🤣
– Craziest crossover ever🚨🚨
– Johnny Sins X Ranveer Singh👏👏
Well done Bold Care!pic.twitter.com/obpd1nto6z
— Out of Context Bharat (@oocBharat) February 12, 2024
‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’
ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್: ಸಚಿವ ಕೆ.ಎನ್.ರಾಜಣ್ಣ