Sunday, February 9, 2025

Latest Posts

ನಾನು ಕ್ಷೇಮವಾಗಿದ್ದೇನೆಂದು ಘಟನೆ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ನಟ ಸೈಫ್

- Advertisement -

Bollywood News: ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ ನಿವಾಸಕ್ಕೆ ನುಗ್ಗಿದ್ದ ದರೋಡೆ ಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳು ಮುಂದಾಗಿದ್ದ. ಈ ವೇಳೆ ಸೈಫ್ ಅಲಿ ಖಾನ್‌ಗೆ 6 ಬಾರಿ ಚಾಕುವಿನಿಂದ ಚುಚ್ಚಿದ್ದು, ಸೈಫ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳ್ಳಂಬೆಳ್ಳಿಗ್ಗೆಯೇ ಸೈಫ್‌ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದೀಗ ಸೈಫ್ ಸೇಫ್ ಆಗಿದ್ದಾರೆ.

ಈ ಬಗ್ಗೆ ಸೈಫ್ ಖುದ್ದು ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ. ಯಾವುದೇ ತೊಂದರೆಯಾಗಿಲ್ಲ. ಅಭಿಮಾಾನಿಗಳ ಪ್ರೀತಿಗೆ ನಾನು ಚಿರಋಣಿ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ಬಳಿಕ ಎಲ್ಲ ಸತ್ಯ ಹೊರಬೀಳಲಿದೆ ಎಂದು ಸೈಫ್ ಹೇಳಿದ್ದಾರೆ.

ಸೈಫ್ ಮನೆಯವರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಬಗ್ಗೆಯೇ ಅನುಮಾನವಿದೆ. ಕೆಲಸ ಮಾಡುತ್ತಿದ್ದವರ ಸಹಾಯವಿಲ್ಲದೇ, ಯಾರೂ ಇಂಥ ಕೆಲಸ ಮಾಡಲು ಸಾಧ್ಯವಿಲ್ಲ. ಯಾರೋ ಈ ದರೋಡೆಗೆ ಸಹಾಾಯ ಮಾಡಿದ್ದಾರೆ. ನಮ್ಮ ಮನೆಗೆ ಎರಡು ದೊಡ್ಡ ದೊಡ್ಡ ಗೇಟ್‌ಗಳಿಗೆ. ಎರಡೂ ಕಡೆ ಇಬ್ಬಿಬ್ಬರು ಸೆಕ್ಯುರಿಟಿಗಳಿದ್ದಾರೆ. ಅವರನ್ನು ದಾಟಿ ಅವನು ಒಳ ನುಗ್ಗಲು ಸಾಧ್ಯವಿಲ್ಲ. ಆದರೆ ದರೋಡೆ ಕೋರ ಇಷ್ಟು ಧೈರ್ಯವಾಗಿ ಒಳ ನುಗ್ಗಿದ್ದಾನೆಂದರೆ, ಇದರಲ್ಲಿ ಮನೆಯಲ್ಲಿ ಇರುವವರ ಸಹಾಯ ಪಡೆದೇ ಇರುತ್ತಾನೆ ಎಂದು ಸೈಫ್ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಇನ್ನು ಸೈಫ್ ಅಲಿ ಖಾನ್ ಮಾತ್ರ ದರೋಡೆಕೋರನಿಂದ ಹಲ್ಲೆಗೊಳಗಾಗಿದ್ದು, ಕರೀನಾ ಹೇಗೆ ಬಚಾವಾದ್ರೂ ಅನ್ನೋ ಪ್ರಶ್ನೆಗೆ ಉತ್ತರ, ಅವರು ಅಂದು ರಾತ್ರಿ ಕರಿಶ್ಮಾ ಸೇರಿ ಹಲವರ ಜೊತೆ ಗರ್ಲ್ಸ್ ನೈಟ್ ಪಾರ್ಟಿಗೆ ತೆರಳಿದ್ದರು. ಹಾಗಾಗಿ ಸೈಫ್ ಒಬ್ಬರೇ ಮನೆಯಲ್ಲಿದ್ದರು. ಮನೆಯಲ್ಲಿ ಕೆಲಸದವರೂ ಇದ್ದು, ಅವರು ಕೂಡ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅವರಿಗೂ ಸಣ್ಣ ಪುಟ್ಟ ಗಾಯಗಳಾಾಗಿರುವ ಸಾಧ್ಯತೆ ಇದೆ. ಆ ಬಗ್ಗೆ ಯಾವುದೇ ವರದಿಯಾಗಿಲ್ಲ.

- Advertisement -

Latest Posts

Don't Miss