Bollywood News: ಸೋನು ಸೂದ್ ಬರೀ ನಟನೆಗಷ್ಟೇ ಸೀಮಿತರಾಗದೇ ಸಮಾಜ ಸೇವೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಕನ್ನಡಿಗರೂ ಸೇರಿ ದೇಶದ ಹಲವು ಕಡೆಗಳಿಂದ ಮುಂಬೈಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರನ್ನು ತಮ್ಮದೇ ಖರ್ಚಿನಲ್ಲಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಸೋನುಸೂದ್ ಮತ್ತೊಂದು ಉತ್ತಮ ನಿರ್ಧಾರ ಮಾಡಿದ್ದಾರೆ.
ತಮ್ಮ ಹೊಸ ಸಿನಿಮಾ ಕಲೆಕ್ಷನ್‌ನ್ನು ವೃದ್ಧಾಶ್ರಮಕ್ಕೆ ನೀಡಬೇಕು ಎಂದು ಸೋನುಸೂದ್ ನಿರ್ಧರಿಸಿದ್ದಾರೆ. ಫತೇಹ್ ಎನ್ನುವ ಸಿನಿಮಾವನ್ನು ಸೋನುಸೂದ್ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಇವರ ಪತ್ನಿ ಸೊನಾಲಿ ಸೂದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಯಾವ ರೀತಿ ವಂಚನೆ ಮಾಡಲಾಯಿತು ಎಂಬ ಕೇಸ್‌ಗಳ ಬಗ್ಗೆ ಫತೇಹ್ ಸಿನಿಮಾದಲ್ಲಿ ವಿವರಿಸಲಾಗಿದೆ.
ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಹಲವರು ನಟಿಸಿದ್ದಾರೆ. ಜನವರಿ 10ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ದೇಶದ ಜನರಿಗಾಗಿ ನಾವು ಈ ಸಿನಿಮಾ ಮಾಡಿದ್ದೇವೆ. ಈ ಚಿತ್ರದಿಂದ ಬರುವ ಹಣವನ್ನು ನಾವು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ನೀಡಲಿದ್ದೇವೆ ಎಂದು ಸೋನುಸೂದ್ ಹೇಳಿದ್ದಾರೆ.