Friday, November 22, 2024

Latest Posts

Sudeep : ಬಿಗ್‌ ಬಾಸ್‌ಗೆ ಗುಡ್‌ ಬೈ ಅಂದ್ರಾ ಸುದೀಪ್?

- Advertisement -

ಕಳೆದ ಒಂದು ದಶಕದಿಂದಲೂ ಕಿಚ್ಚ ಸುದೀಪ್‌ ಅವರು ಕನ್ನಡದ ಬಿಗ್‌ಬಾಸ್‌ ಶೋ ನಡೆಸಿಕೊಟ್ಟಿದ್ದಾರೆ. ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಬಾರಿ ಬಿಗ್‌ಬಾಸ್‌ ಸೀಸನ್‌ ೧೧ರ ಶೋ ನಡೆಸಿಕೊಡುವವರು ಯಾರು? ಈ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಲೇ ಇದೆ. ಬಿಗ್‌ಬಾಸ್‌ ಶೋ ನಡೆಸುವ ವಾಹಿನಿ ಸುದೀಪ್ ಅವರನ್ನು ಈ ಸೀಸನ್‌ನಿಂದಲೇ ಹೊರಗಿಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಇದರ ನಡುವೆಯೇ ಸುದೀಪ್‌ ಪ್ರೋಮೋ ಶೂಟ್ ಮುಗಿಸಿದ್ದಾರೆ ಎನ್ನಲಾಗಿತ್ತು. ಆದರೆ, ಈ ಎಲ್ಲಾ ಅಂತೆಕಂತೆಗಳಿಗೆ ಸ್ವತಃ ಸುದೀಪ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಗ್‌ಬಾಸ್‌ ಸೀಸನ್‌ ೧೧ಕ್ಕೆ ನೀವು ಇರ್ತೀರಾ? ಶೋ ನಡೆಸಿಕೊಡ್ತೀರಾ? ಈ ಪ್ರಶ್ನೆಗೆ, ಸುದೀಪ್‌ ಹೆಚ್ಚೇನು ಮಾತನಾಡದೆ, ಸದ್ಯ ಆ ಕುರಿತು ಮಾತುಕತೆ ನಡೆಯುತ್ತಿದೆ. ನಾನು 10 ವರ್ಷ ಬಿಗ್ ಬಾಸ್​ಗೆ ಡೆಡಿಕೇಟ್ ಮಾಡಿದ್ದೇನೆ. ಬಿಗ್ ಬಾಸ್‌ ಗೆ ನಿಜಕ್ಕೂ ದೊಡ್ಡ ಶ್ರಮವಿದೆ. ಎಲ್ಲರಿಗೂ ನಾನು ಆ ಶೋ ನಡೆಸಿಕೊಟ್ಟಿದ್ದೇನೆ ಅನ್ನೋದಷ್ಟೇ ಗೊತ್ತು. ಆದರೆ, ಅದನ್ನು ಹೇಗೆ ನಿಂತು ನಡೆಸಿಕೊಟ್ಟಿದ್ದೀನಿ ಗೊತ್ತಾ? ಮ್ಯಾಕ್ಸ್ ಸಿನಿಮಾ ರಾತ್ರಿ ಶೂಟ್ ನಡೆಯುತ್ತಿತ್ತು. ಅದು ಮುಂಜಾನೆ 3:30 ವರೆಗೆ ನಡೆಯುತ್ತಿತ್ತು. ಫ್ಲೈಟ್‌ ಲೇಟ್ ಆಗುತ್ತದೆ ಎನ್ನುವ ಕಾರಣಕ್ಕೆ ಚಾಟೆರ್ಡ್​ ಫ್ಲೈಟ್ ಬಾಡಿಗೆ ತೆಗೆದುಕೊಂಡಿದ್ದೆ. ಅದು ನನ್ನದೇ ದುಡ್ಡಲ್ಲಿ. ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಮನೆಗೆ ಬರುತ್ತಿದ್ದೆ. ನಂತರ ಬಿಗ್ ಬಾಸ್ ಸೆಟ್​ಗೆ ಹೋಗುತ್ತಿದ್ದೆ’ ಎಂದು ಸುದೀಪ್‌ ಆ ದಿನಗಳ ಕಷ್ಟವನ್ನು ವಿವರಿಸಿದ್ದಾರೆ.

 

ಇನ್ನು, ಶೋ ಶೂಟಿಂಗ್‌ ಬಂದಾಗ, ಮಾರ್ನಿಂಗ್‌ ಬಿಗ್ ಬಾಸ್ ಶೂಟ್​ಗೆ ನಿಂತರೆ ಮಧ್ಯಾಹ್ನದವರೆಗೆ ಶೂಟ್ ಮಾಡಿಕೊಡುತ್ತಿದ್ದೆ. ಆ ಬಳಿಕ 2 ಗಂಟೆ ಗ್ಯಾಪ್ ಇರುತ್ತಿತ್ತು. ಬಳಿಕ ಇನ್ನೊಂದು ಎಪಿಸೋಡ್‌ ಶೂಟ್‌ಗೆ ರೆಡಿಯಾಗುತ್ತಿದ್ದೆ. ಅದು ಮುಗಿಸಿಕೊಂಡು ರಾತ್ರೋರಾತ್ರಿ ಚೆನ್ನೈ ಕಡೆಗೆ ಪ್ರಯಾಣ ಬೆಳೆಸುತ್ತಿದ್ದೆ. ಅಲ್ಲಿಂದ ಪುನಃ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ಕೆಲಹೊತ್ತಿಗೆ ಚಿತ್ರೀಕರಣ ನಡೆಯುತ್ತಿತ್ತು. ಆಗ ನನಗೆ ಅನಿಸುತ್ತಿದ್ದ ಯೋಚನೆ ಅಂದರೆ, ಸಿನಿಮಾಗೂ ನ್ಯಾಯ ಕೊಡಕ್ಕಾಗುತ್ತಿಲ್ಲ. ಶೋಗೂ ಕೊಡುವುದಕ್ಕಾಗುತ್ತಿಲ್ಲ. ಆದರೂ ನಾನು ಆ ಶೋನ ಎಂಜಾಯ್ ಮಾಡಿದ್ದೇನೆ. ಆಸಕ್ತಿಯೂ ಇದೆ. ಆದರೆ, ಕೆಲವೊಮ್ಮೆ ಮೂವ್​ ಆನ್ ಆಗಲೇಬೇಕಕ್ಕವೇ? ನನಗೆ ಮಾಡೋಕೆ ಇಂಟ್ರೆಸ್ಟಿಲ್ಲ, ಅವರಿಗೆ ನಾನು ಬೇಡ ಎಂದಲ್ಲ. ಇದೆಲ್ಲ ಕಾಂಟ್ರವರ್ಸಿ.

ಬಿಗ್ ಬಾಸ್ ವಿಚಾರ ಬಂದಾಗ ಅವರೇ ಹೇಳಬಹುದು ಬಿಡಿ ಎಂದಿರುವ ಸುದೀಪ್‌ ಗೆ ಅತ್ತ ಪತ್ರಕರ್ತರು, ‘ಬೇರೆ ಕಲಾವಿದರಿಗೆ ಹುಡುಕಾಟ ಮಾಡಲಾಗುತ್ತಿದೆ ಎಂಬ ಮಾತಿದೆಯಲ್ಲ ಎಂದು ಪ್ರಶ್ನಿಸಿದರೆ, “ಬೇರೆಯವರನ್ನು ಹುಡುಕಲಿ ಎಂದೇ ನಾನು ಬಯಸುತ್ತಿದ್ದೇನೆ’ ಎಂದಿರುವ ಸುದೀಪ್‌, ‘ಅಮ್ಮ ನಿನ್ನ ಅಡುಗೆ ಬೇಡ, ಖಾರ ಆಗುತ್ತಿದೆ ಎಂದಾಗ, ಅವರು ಅಡುಗೆ ಮಾಡೋದು ನಿಲ್ಲಿಸಲ್ಲ. ಕಡಿಮೆ ಖಾರ ಹಾಕಿ ಅಡುಗೆ ಮಾಡಿಕೊಡಬಹುದು’ ಅಲ್ಲವೇ ಎಂದಿದ್ದಾರೆ ಕಿಚ್ಚ ಸುದೀಪ್.

- Advertisement -

Latest Posts

Don't Miss