www.karnatakatv.net :
ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೆ ಕ್ರಾಂತಿಕಾರಿ ಗೆಟಪ್ನಲ್ಲಿ ಸಿನಿಪ್ರಿಯರ ಮುಂದೆ ಬರಲು ರೆಡಿಯಾಗ್ತಿದ್ದಾರೆ.. ಈ ಹಿಂದೆ ಸೂಪರ್ ಹಾಗೂ ಟೋಪಿವಾಲ ಚಿತ್ರಗಳಲ್ಲಿ ಕ್ರಾಂತಿಕಾರಕ ವಿಚಾರಗಳನ್ನ ಉಪ್ಪಿ ಹೇಳಿದ್ರು.. ಇದೀಗ ಅಂತಹದ್ದೇ ಸಬ್ಜೆಕ್ಟ್ ಇರುವ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರಂತೆ.. ಉಪ್ಪಿ ನಟಿಸಲಿರುವ ಈ ಹೊಸ ಚಿತ್ರಕ್ಕೆ ಮಾಸ್ಟರ್ ಪೀಸ್, ಶ್ರೀ ಭರತ ಬಾಹುಬಲಿ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್ ಕಟ್ ಹೇಳಲಿದ್ದಾರೆ.. ಸಾಮಾಜಿಕ ಕಳಕಳಿಯ ಚಿತ್ರವಾದ್ರೂ ಸಸ್ಪೆನ್ಸ್ ಥ್ರಿಲ್ಲರ್, ಕಮರ್ಷಿಯಲ್ ಹಾಗೂ ಎಂಟರ್ಟೇನ್ಮೆಂಟ್ ನಂತಹ ಎಲ್ಲಾ ರೀತಿಯ ಅಂಶಗಳೂ ಸಹ ಈ ಚಿತ್ರದಲ್ಲಿರಲಿವ್ಯಂತೆ.. ಇನ್ನೂ ಮಂಜು ಮಾಂಡವ್ಯ ಅವರು ಮೊದಲ ಬಾರಿ ಕಥೆ ಹೇಳಿದಾಗ್ಲೇ ಉಪ್ಪಿ ಬಹಳ ಇಂಪ್ರೆಸ್ ಆಗಿ ಸಿನಿಮಾ ಮಾಡಲು ಒಪ್ಪಿಕೊಂಡ್ರಂತೆ.. ಉಪ್ಪಿಯ ಈ ಮುಂದಿನ ಸಿನಿಮಾ ಸದ್ಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ