Movie News: ಕೋರೋನಾ ತಗುಲಿ ನಟ ಮತ್ತು ರಾಜಕಾರಣಿ ವಿಜಯ್ ಕಾಂತ್(71) ನಿಧನರಾಗಿದ್ದಾರೆ. ಕ್ಯಾಪ್ಟನ್ ವಿಜಯ್‌ಕಾಂತ್ ಎಂದೇ ಖ್ಯಾತವಾಗಿದ್ದ ಇವರು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊರೋನಾ ತಗುಲಿತ್ತು. ಹೀಗಾಗಿ ಐಸಿಯುನಲ್ಲಿ ಟ್ರೀಟ್‌ಮೆಂಟ್ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ವಿಜಯಕಾಂತ್ ಸಾವನ್ನಪ್ಪಿದ್ದಾರೆ.
ವಿಜಯಕಾಂತ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ, ಅವರ ಮನೆಜನ ಮತ್ತು ಪಕ್ಷದವರು ಗೊಂದಲದ ಹೇಳಿಕೆ ನೀಡಿದ್ದಾರೆ. ಕೆಲವರು ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದರೆ, ಇನ್ನು ಕೆಲವರು ಅವರಿಗೆ ಕೋವಿಡ್ ಬಂದಿದೆ ಎಂದಿದ್ದರು. ಮತ್ತೆ ಪಕ್ಷದ ಕೆಲ ಕಾರ್ಯಕರ್ತರು ಅವರಿಗೆ ಬರೀ ಜ್ವರ ಬಂದಿದೆ. ಇನ್ನು ಕೆಲ ದಿನಗಳಲ್ಲೇ ಅವರು ಆರೋಗ್ಯವಾಗಿ ಮನೆಗೆ ಬರಲಿದ್ದಾರೆ ಎಂದಿದ್ದರು. ಆದರೆ ವಿಜಯ ಕಾಂತ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಹಲವಾರು ವರ್ಷಗಳ ಕಾಲ ವಿಜಯ್ ತಮಿಳು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜಕೀಯಕ್ಕೆ ಬಂದಿದ್ದರು. ವಿಜಯ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ, ಹಲವು ನಟ ನಟಿಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.