Hubballi Movie News: ಹುಬ್ಬಳ್ಳಿ: ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದ ಪಕ್ಕದಲ್ಲಿನ ಶ್ರೀ ಬಸವೇಶ್ವರ ಖಾನಾವಳಿಯಲ್ಲಿ ನಟ ವಿನಯ ರಾಜಕುಮಾರ ಉತ್ತರ ಕರ್ನಾಟಕ ಶೈಲಿಯ ಭೋಜನ ಹಾಗೂ ಹೋಳಿಗೆಯನ್ನು ಸವಿದರು.
ತಮ್ಮ ಐದನೇ ಸಿನಿಮಾ ಸರಳ ಪ್ರೇಮ ಕಥೆ ಚಿತ್ರದ ಪ್ರಚಾರ ಕಾರ್ಯದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಅವರು, ಶ್ರೀ ಬಸವೇಶ್ವರ ಖಾನಾವಳಿಯ ಹೋಳಿಯ ರುಚಿ ಸವಿದು ಖುಷಿಪಟ್ಟರು.
ನಮ್ಮ ಅಜ್ಜಿಯ ಕೈ ರುಚಿಯ ಅನುಭವವನ್ನು ಇಲ್ಲಿನ ಹೋಳಿಗೆ ನೀಡಿತು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿಗೆ ಬಂದಾಗ ಈ ಸವಿಯನ್ನು ಮರೆಯುವುದಿಲ್ಲ ಎಂದರು.
ಬಳಿಕ ಖಾನಾವಳಿ ಮಾಲೀಕ ಅಪ್ಪಣ್ಣ ಮಾತನಾಡಿ, ಡಾ.ರಾಜಕುಮಾರ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ ಅವರ ಮಗ ವಿನಯ ರಾಜಕುಮಾರ ನಮ್ಮ ಖಾನಾವಳಿಯಲ್ಲಿ ಹೋಳಿಗೆ ರುಚಿಯನ್ನು ಸವಿದರು. ಇದು ಖುಷಿ ತಂದಿದೆ. ಇದೇ ತರಹ ಸುಚಿ, ರುಚಿ ಕಾಯ್ದುಕೊಂಡು ಹೋಗಲು ತಿಳಿಸಿ, ಶುಭ ಹಾರೈಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಮುತ್ತಣ್ಣವರ, ವಿಜಯಕುಮಾರ್ ಅಪ್ಪಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!