ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಕುರಿತ ಟೀಕಾತ್ಮಕ ಪೋಸ್ಟ್ ಕುರಿತಾಗಿ ನಟ ವಿವೇಕ್ ಒಬೇರಾಯ್ ಇದೀಗ ಕ್ಷಮೆಯಾಚಿಸಿದ್ದಾರೆ.
‘ನಾನು ತಮಾಷೆಗಾಗಿ ಆ ಟ್ವೀಟ್ ಮಾಡಿದ್ದೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಮಾಡಿಲ್ಲ. ಟ್ವೀಟ್ ಕುರಿತಾದ ನನ್ನ ರಿಪ್ಲೈ ನಿಂದ ಯಾವೊಬ್ಬ ಮಹಿಳೆಗಾದ್ರೂ ಅಸಮಾಧಾನವಿದ್ರೆ ನನ್ನನ್ನು ಕ್ಷಮಿಸಿಬಿಡಿ’ ಅಂತ ವಿವೇಕ್ ಹೇಳಿಕೊಂಡಿದ್ದಾರೆ.
ಅಲ್ಲದೆ ‘ಕೆಲವೊಂದು ಬಾರಿ ನಾವು ಯಾವುದನ್ನು ತಮಾಷೆ ಮತ್ತು ಮಾಮೂಲಿ ವಿಷಯ ಅಂತ ಅಂದುಕೊಳ್ಳುತ್ತೇವೋ ಅದರ ಬಗ್ಗೆ ಇತರರ ಭಾವನೆ ಭಿನ್ನವಾಗಿರುತ್ತದೆ. ನಾನು ಕಳೆದ 10 ವರ್ಷಗಳಿಂದ ಸುಮಾರು 2000ಕ್ಕೂ ಅಧಿಕ ಸೌಲಭ್ಯ ವಂಚಿತ ಮಹಿಳೆಯರ ಸ್ವಾವಲಂಬನೆಗಾಗಿ ದುಡಿಯುತ್ತಿದ್ದೇನೆ. ಮಹಿಳೆಯರ ಮೇಲೆ ಅಗೌರವ ತೋರುವ ಭಾವನೆ ನನ್ನಲ್ಲಿ ಎಂದಿಗೂ ಬರಲು ಸಾಧ್ಯವೇ ಇಲ್ಲ’ ಅಂತ ಟ್ವೀಟ್ ಮಾಡೋ ಮೂಲಕ ಸಮಜಾಯಿಷಿ ನೀಡೋ ಪ್ರಯತ್ನ ಮಾಡಿದ್ದಾರೆ.
ಅಂದಹಾಗೆ ನಿನ್ನೆ ಮಾಡಿದ್ದ ಟ್ವೀಟ್ ಕೂಡ ನಟ ವಿವೇಕ್ ಒಬೇರಾಯ್ ಡಿಲೀಟ್ ಮಾಡಿದ್ದಾರೆ.
ಡಿ ಬಾಸ್ ಅಂದ್ರೆ ನಟ ಅಭಿಷೇಕ್ ಅಂಬರೀಶ್ ಗೆ ಭಯ ಅಂತೆ. ಯಾಕೆ ಅಂತ ತಿಳಿದುಕೊಳ್ಳೋಕ್ಕೆ ಈ ವಿಡಿಯೋ ತಪ್ಪದೇ ನೋಡಿ.