Friday, May 9, 2025

Latest Posts

ರಾಕಿಭಾಯ್ ಗೆ ಸಾಥ್ ಕೊಟ್ಟ ಮಾಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್

- Advertisement -

ನ್ಯಾಷನಲ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಜನವರಿ 8 ಸಖತ್ ಸ್ಪೆಷಲ್ ಡೇ. ಯಾಕಂದ್ರೆ ಅದು ಯಶ್ ಜನ್ಮದಿನ. ನೆಚ್ಚಿನ ಸ್ಟಾರ್ ಹುಟ್ದಬ್ಬ ಅಂದ್ರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಹಾರ-ತುರಾಯಿ, ಕೇಕ್, ಕಟೌಟ್ ಅಂತೆಲ್ಲಾ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿ ಫೇವರೆಟಿ ಸ್ಟಾರ್ ನೊಂದಿಗೆ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಳ್ತಾರೆ. ಇಷ್ಟೆಲ್ಲಾ ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೆಷನ್ ಇರುವಾಗಿ ಭಕ್ತಗಣಕ್ಕೆ ಏನಾದ್ರೂ ಗಿಫ್ಟ್ ಸಿಗಲೇಬೇಕಲ್ವಾ.? ಖಂಡಿತ ಅದಕ್ಕಾಗಿ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಟೀಸರ್ ಹೊರತರಲು ನೀಲ್ ತಂಡ ಸತತ ಶ್ರಮ ವಹಿಸ್ತಿದೆ. ಕೆಜಿಎಫ್ ಕೋಟೆಯಲ್ಲಿ ಅಬ್ಬರಿಸುವ ರಾಕಿಗೆ ಸಲಾಂ ಹೊಡೆದು ವೆಲ್ ಮಾಡಲು ಯಶ್ ಫ್ಯಾನ್ಸ್ ಕಾತುರರಾಗಿ ಕಾಯ್ತಿದ್ದಾರೆ.

ಈ ನಡುವೆಯೇ ರಾಕಿ ನರಾಚಿ ಕೋಟೆಯಿಂದ ಸೆನ್ಸೆಷನಲ್ ನ್ಯೂಸ್ ವೊಂದು ಹೊರಬಿದ್ದಿದೆ. ಪಂಚಭಾಷೆಯಲ್ಲಿ ತೆರೆಗೆ ಅಪ್ಪಳಿಸಲಿರುವ ಕೆಜಿಎಫ್-2 ಸಿನಿಮಾದ ಮಾಲಯಾಳಂ ವರ್ಷನ್ ಗೆ ಮಾಲಿವುಡ್ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರ್ ಸಾಥ್ ಕೊಟ್ಟಿದ್ದಾರೆ. ಪೃಥ್ವಿರಾಜ್  ‘ಪೃಥ್ವಿರಾಜ್ ಪ್ರೊಡಕ್ಷನ್’ ನಲ್ಲಿ ಮಾಲಯಾಳಂನಲ್ಲಿ ಕೆಜಿಎಫ್-2 ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಪೃಥ್ವಿರಾಜ್ ಸುಕುಮಾರ್ ಹೇಳಿದ್ದಾರೆ.

ನಾನು ಕೆಜಿಎಫ್ ಫ್ರಾಂಚೈಸಿಯ ದೊಡ್ಡ ಫ್ಯಾನ್ . ಲೂಸಿಫರ್ ಸಿನಿಮಾ ಮಾಡಿದ ಬಳಿಕ ನನ್ನ ಮೊದಲು ಸಂಪರ್ಕಿಸಿ, ಮಾತನಾಡಿದವರಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲಿಗರು. ನಮ್ಮ ದೇಶದ ಬಹುನಿರೀಕ್ಷೆಯ ಸಿನಿಮಾವೊಂದನ್ನು ಅರ್ಪಿಸುವುದಕ್ಕಿಂತ ಉತ್ತಮವಾದ ಆರಂಭ ಇನ್ನೊಂದಿಲ್ಲ. ಪೃಥ್ವಿರಾಜ್ ಪ್ರೊಡಕ್ಷನ್ ಬಹಳ ಹೆಮ್ಮೆಯಿಂದ ಈ ಸಿನಿಮಾವನ್ನು ಅರ್ಪಿಸುತ್ತದೆ. ಲಕ್ಷಾಂತರ ಜನರಂತೆ ರಾಕಿಯ ಕಥೆಯನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಪೃಥ್ವಿರಾಜ್ ಗೆ ನಿರ್ದೇಶಕ ಪ್ರಶಾಂತ್ ನೀಲ್ ಧನ್ಯವಾದ ಹೇಳಿದ್ದು, ನಿಮ್ಮೊಂದಿಗಿನ ಅಸೋಸಿಯೇಷನ್ ತುಂಬಾ ಥ್ರಿಲ್ ನೀಡಿದೆ. ಶೀಘ್ರದಲ್ಲೇ ಭೇಟಿಯಾಗೋಣ’ ಎಂದಿದ್ದಾರೆ.

- Advertisement -

Latest Posts

Don't Miss