ಸ್ಯಾಂಡಲ್ ವುಡ್ ನ ಶ್ಯಾನೆ ಟಾಪ್ ಹುಡುಗಿ ನಟಿ ಅದಿತಿ ಪ್ರಭುದೇವ ಇದೀಗ ವಿಭಿನ್ನ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದು ಎಲ್ಲರ ಗಮನ ಸೆಳೀತಿದ್ದಾರೆ.. ಅದಿತಿ ಅವರು ಧರಿಸಿರುವ ಈ ಸೀರೆಯ ವಿಶೇಷತೆ ಅಂದ್ರೆ 50 ರಿಂದ ಹಿಡಿದು 90 ರದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಲವಾರು ಹಿರಿಯ ನಟಿಯರ ಫೇಸ್ ಪ್ರಿಂಟ್ ಈ ಸೀರೆಯಲ್ಲಿವೆ.. ಜೊತೆಗೆ ಬ್ಲೌಸ್ ಕೂಡ ಅದೇ ಥೀಮ್ ನಲ್ಲಿದೆ.. ಕನ್ನಡ ಚಿತ್ರಲೋಕವನ್ನ ಶ್ರೀಮಂತಗೊಳಿಸಿದ ಸುಮಾರು 20 ಜನ ಕಲಾವಿದೆಯರ ಫೇಸ್ ಪ್ರಿಂಟ್ ಗಳಿರುವ ಬ್ಲ್ಯಾಕ್ ಅಂಡ್ ವೈಟ್ ಸೀರೆಯಲ್ಲಿ ನಟಿ ಅದತಿ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿದ್ದು, ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ.. ಫ್ಯಾಷನ್ ಡಿಸೈನರ್ ಲಕ್ಷ್ಮೀ ಕೃಷ್ಣ ಅವರು ಹೀಗೆ ಸೀರೆಯನ್ನ ಸೃಜನಾತ್ಮಕವಾಗಿ ವಿನ್ಯಾಸಗೊಳಿಸಿದ್ದು, ಇದುವರೆಗೂ ಕನ್ನಡದಲ್ಲಿ ಇದುವರೆಗೂ ಯಾರೂ ಇಂತಹ ಪ್ರಯತ್ನ ಮಾಡಿಲ್ಲ ಅಂದಿದ್ದಾರೆ.. ಈ ಮೂಲಕ ಕನ್ನಡ ಚಿತ್ರರಂಗದ ಇತಿಹಾಸವನ್ನ ಶ್ರೀಮಂತಗೊಳಿಸಿ, ತಮ್ಮ ನಟನೆಯ ಮೂಲಕ ಜನರ ಮೇಲೆ ಸಾಕಷ್ಟು ಪ್ರಭಾವ ಬೀರಿರುವ ನಟಿಯರನ್ನ ನೆನಪಿಸಿಕೊಳ್ಳುವ ಕೆಲಸ ಮಾಡಿದ್ದೇನೆ ಅಂದಿದ್ದಾರೆ.. ಇನ್ನೂ ಫೋಟೋಶೂಟ್ ನಲ್ಲಿ ಮಿಂಚಿರುವ ನಟಿ ಅದಿತಿ ಕೂಡ ನನಗೆ ಸೀರೆ ಅಂದ್ರೆ ಬಹಳ ಇಷ್ಟ.. ಜೊತೆಗೆ ಹಳೆಯ ಸಿನಿಮಾ ನಟಿಯರು ಅಂದ್ರೆ ಕೂಡ ಬಹಳ ಇಷ್ಟ.. ಇವೆರಡೂ ಕಾಂಬಿನೇಶನ್ ಈ ಸೀರೆಯಲ್ಲಿದ್ದವು ಹಾಗಾಗಿ ಈ ಫೋಟೋಶೂಟ್ ಮಾಡಿಸಿಕೊಂಡೆ ಅಂದಿದ್ದಾರೆ.. ಇದರಲ್ಲಿರುವ ಎಲ್ಲಾ ನಟಿಯರೂ ನನಗೆ ಸ್ಫೂರ್ತಿ ಅಂದಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ