Bollywood News: ಪ್ರತೀ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್ ಬಂತಂದ್ರೆ, ಭಾರತೀಯ ಅಭಿಮಾನಿಗಳು ಕಾಯೋದೇ, ಐಶ್ ಔಟ್‌ಫಿಟ್ ನೋಡೋಕ್ಕೆ. ಅದರಲ್ಲೂ ಕನ್ನಡಿಗರು, ನಮ್ಮ ಕರಾವಳಿ ಕನ್ನಡತಿ ಈ ಬಾರಿ ರೆಡ್ ಕಾರ್ಪೇಟ್ ಮೇಲೆ ಹೇಗೆ ಮಿಂಚುತ್ತಾರೆ ಅಂತಾ ನೋಡೋಕ್ಕೆ ಕಾಯ್ತಿರ್ತಾರೆ.
ಆದರೆ ಈ ಬಾರಿ ಐಶ್ ಕಾನ್ ಫೆಸ್ಟಿವಲ್‌ಗೆ ಹೋಗ್ತಾರೋ ಇಲ್ವೋ ಅನ್ನೋ ಡೌಟ್ ಇತ್ತು. ಯಾಕಂದ್ರೆ ಐಶ್ ಕೈಗೆ ಪೆಟ್ಟಾಗಿದ್ದು, ಅವರು ಬ್ಯಾಂಡೇಜ್ ಸುತ್ತಿಕೊಂಡೇ ಓಡಾಡುತ್ತಿದ್ದರು. ಆದರೂ ಕೂಡ ಐಶ್ ಮಗಳು ಆರಾಧ್ಯಾಳೊಂದಿಗೆ ಕಾನ್ ಫೆಸ್ಟಿವಲ್‌ಗೆ ಬಂದಿದ್ದು, ಕಪ್ಪು, ಬಿಳಿ ಮತ್ತು ಬಂಗಾರದ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.
ರೆಡ್ ಕಾರ್ಪೇಟ್ ಮೇಲೆ ಹೆಜ್ಜೆ ಹಾಕಿರುವ ಐಶ್, ಪಾಪರಾಜಿಗಳಿಗೆ ಫುಲ್ ಕಾನ್ಫಿಡೆನ್ಸ್‌ನಲ್ಲಿಯೇ ಪೋಸ್ ಕೊಟ್ಟಿದ್ದಾರೆ. ಕೈ ನೋವಿನ ನೆಪ ಹೇಳದೇ, ನಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ, ನೆಟ್ಟಿಗರು ಶ್ಲಾಘಿಸಿದ್ದಾರೆ. ಇನ್ನು ಅಮ್ಮನ ಕೈ ನೋವಿನ ಬಗ್ಗೆ ಮಗಳಾದ ಆರಾಧ್ಯ ಗಮನ ಹರಿಸಿ, ಆಕೆಯೊಂದಿಗಿದ್ದು, ಆಕೆಯ ಆರೈಕೆ ಮಾಡಿದ್ದಾರೆ.
ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ




