Sunday, September 8, 2024

Latest Posts

ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್

- Advertisement -

Bollywood News: ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಹಾಲಿವುಡ್ ಸೇರಿ ಹಲವು ಗಣ್ಯಾತಿಗಣ್ಯರು ತಿರುಮಲಕ್ಕೆ ಬರುತ್ತಾರೆ. ಅದೇ ರೀತಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಸಹ ತಮ್ಮ ಬಾಯ್‌ಫ್ರೆಂಡ್ ಮತ್ತು ಓರಿಯೊಂದಿಗೆ ತಿರುಪತಿಗೆ ಬಂದಿದ್ದಾರೆ. ಈ ವೇಳೆ ನಟಿ, ಮೊಣಕಾಲಿನಿಂದ ಮೆಟ್ಟಿಲುಗಳನ್ನು ಹತ್ತಿ, ತಿರುಪತಿಯ ದರ್ಶನ ಮಾಡಿದ್ದಾರೆ.

ಈ ವೀಡಿಯೋವನ್ನು ಜಾನ್ಹವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾನ್ವಿ ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಮತ್ತು ಸೆಲೆಬ್ರಿಟಿಗಳ ಜೊತೆ ವಿಚಿತ್ರವಾಗಿ ಫೋಟೋ ತೆಗೆಸಿಕೊಂಡು, ದುಡ್ಡು ಪಡೆಯೋ ಸೆಲೆಬ್ರಿಟಿ ಓರ್ರಿ ಜೊತೆ ತಿರುಮಲಕ್ಕೆ ಭೇಟಿ ಕೊಟ್ಟು, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.

ಈ ಬಗ್ಗೆ ಓರ್ರಿ ತಮ್ಮ ಯೂಟ್ಯೂಬ್‌ನಲ್ಲಿ ವ್ಲಾಗ್ ಮಾಡಿ ಹಾಕಿದ್ದು, ತಾನು ಮೊದಲ ಬಾರಿ ತಿರುಪತಿಗೆ ಭೇಟಿ ನೀಡುತ್ತಿದ್ದೇನೆ. ಜಾನ್ವಿ 50ನೇ ಸಲ ಮತ್ತು ಜಾನ್ವಿ ಬಾಯ್‌ಫ್ರೆಂಡ್ 9ನೇಯ ಸಲ ತಿರುಪತಿಗೆ ಭೇಟಿ ನೀಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಸತತ 3 ಗಂಟೆಗಳ ಕಾಲ ಈ ಮೂವರು ಮೆಟ್ಟಿಲು ಹತ್ತಿ, ದೇವರ ದರ್ಶನ ಮಾಡಿದ್ದಾರೆಂದು ಹೇಳಿದ್ದಾರೆ.

ಇನ್ನು ಜಾನ್ವಿಗೆ ಸೌತ್ ಸೇರಿ ಬಾಲಿವುಡ್‌ನಲ್ಲೂ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು, ಇದೆಲ್ಲ ದೇವರ ದಯೆ ಎಂದು ಭಾವಿಸಿ, ಜಾನ್ವಿ ತಿರುಪತಿ ತಿಮ್ಮಪ್ಪನಿಗೆ ಈ ರೀತಿ ಧನ್ಯವಾದ ಅರ್ಪಿಸಿದ್ದಾರೆ.

ಕಾಂಗ್ರೆಸ್’ನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ, ಜನರೇ ಶಕ್ತಿಹೀನಗೊಳಿಸಿದ್ದಾರೆ: ಪ್ರಹ್ಲಾದ್ ಜೋಶಿ

ಅಳೆದು ತೂಗಿ ಅಸೂಟಿಗೆ ಲೋಕಸಭೆ ಟಿಕೆಟ್ – ರಾಜಕೀಯ ಹಿನ್ನೆಲೆ

ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ: ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss