Movie News: ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಕೃತಿಕರಬಂಧ, ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಎಂಗೇಜ್ ಆಗಿದ್ದಾರೆ. ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದು, ನಿನ್ನೆ ಎಂಗೇಜ್ ಆಗಿದ್ದಾರೆ.
ಕುಟುಂಬದವರನ್ನು ಒಪ್ಪಿಸಿಯೇ ಈ ಜೋಡಿ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಈ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದೆ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಿದ್ದ ಕೃತಿ ಮತ್ತು ಪುಲ್ಕಿತ್ ಮಧ್ಯೆ ಸ್ನೇಹವಾಗಿ, ಈ ಸ್ನೇಹ ಪ್ರೀತಿಯಾಗಿ ಬದಲಾಗಿದೆ. 2021ರಲ್ಲೇ ಈ ಗೂಗ್ಲಿ ಚೆಲುವೆ ತಾನು ಪುಲ್ಕಿತ್ ಜೊತೆ ಸಂಬಂಧದಲ್ಲಿರುವುದನ್ನು ಹೇಳಿದ್ದರು. ಇದೀಗ ಎಂಗೇಜ್ ಆಗಿದ್ದಾರೆ.
ಪುಲ್ಕಿತ್‌ಗೆ ಈಗಾಗಲೇ ವಿವಾಹವಾಗಿ ಓರ್ವ ಮಗಳು ಇದ್ದಾಳೆ. ಆದರೆ ಈ ನಟ ಆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು, ಕೃತಿ ಕರಬಂಧಳನ್ನು ಪ್ರೀತಿ ಮಾಡಿದ್ದಾರೆ. ಇದೀಗ ಇಬ್ಬರು ಎಂಗೇಜ್ ಆಗಿದ್ದು, ನೆಟ್ಟಿಗರು ಪರ ವಿರೋಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಅವರ ವೈಯಕ್ತಿಕ ವಿಷಯ, ನಮಗ್ಯಾಕೆ ಬೇಕು ಎಂದರೆ, ಇನ್ನು ಕೆಲವರು ಬಾಲಿವುಡ್‌ನಲ್ಲಿ ಕಟ್ಟಿಕೊಂಡವರನ್ನು ಬಿಟ್ಟು, ನಟಿಯನ್ನು ಮದುವೆಯಾಗುವುದು ಹೊಸ ಟ್ರೆಂಡ್ ಆಗಿ ಬಿಟ್ಟಿದೆ. ಈತ ಓರ್ವ ಹೆಣ್ಣಿನ ಜೀವನ ಹಾಳು ಮಾಡಿದ್ದಾನೆಂದು ಹಿಗ್ಗಾಮುಗ್ಗಾ ಬೈದಿದ್ದಾರೆ.
‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’
2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್