Movie News: ನೆಲಮಂಗಲ: ಅನಾರೋಗ್ಯ ದಿಂದ ಹಾಸಿಗೆ ಹಿಡಿದಿರುವ ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ತೋಟದ ಮನೆಗೆ ಆಗಮಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಲೀಲಾವತಿ ಅವರ ಆರೋಗ್ಯ ದಿನೇ ದಿನೇ ಕ್ಷೀ ಣಿಸುತ್ತಿದೆ. ಲೀಲಾವತಿ ಹಾಗೂ ಅವರ ಪುತ್ರ ವಿನೋದ್‌ರಾಜ್ ಅವರ ಸೇವೆ ಬಹಳ ದೊಡ್ಡದು, ಹೀಗಾಗಿ ಪಶು ಆಸ್ಪತ್ರೆ ನಿರ್ಮಾಣ ಹಾಗೂ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಜೊತೆಗೆ ಇದೇ ವೇಳೆ ವಿನೋದ್ ರಾಜ್‌ಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್ ಲೀಲಾವತಿಯನ್ನ ನೋಡಿದರೆ ನನ್ನ ತಾಯಿಯನ್ನ ನೋಡದಂತೆ ಆಗುತ್ತೆ. ನೋವಾಗುತ್ತೆ, ಆದರೆ, ತಡ್ಕೋಬೇಕು ಧೈರ್ಯವಾಗಿರು ಎಂದು ನಟ ವಿನೋದ್ ರಾಜ್ ಗೆ ಧೈರ್ಯ ತುಂಬಿದರು.
2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ
ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?