Tuesday, October 14, 2025

Latest Posts

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

- Advertisement -

Film News:

ಸತತವಾಗಿ  ಅಭಿಮಾನಿಗಳಿಗೆ ಸಿಹಿಸುದ್ದಿ  ನೀಡ್ತೀನಿ ಎಂದು  ಹೇಳುತ್ತಿದ್ದ  ರಮ್ಯಾ ಅಂತೂ ಫ್ಯಾನ್ಸ್ ಗೆ  ಒಂದು ಖುಷಿ  ವಿಚಾರನ  ನೀಡಿದ್ದಾರೆ. ಅದೇನಂದ್ರೆ  ಬಹಳ ವರ್ಷನೇ  ಸಿನಿರಂಗದಿಂದ ದೂರವಿರುವ  ನಟಿ ಇದೀಗ  ಮತ್ತೆ  ಸ್ಯಾಂಡಲ್ ವುಡ್  ಗೆ ಕಮ್  ಬ್ಯಾಕ್ ಆಗುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ.

ಹೌದು  ನಟಿ ರಮ್ಯಾ ನಾಯಕಿಯಾಗಿ  ಕನ್ನಡ ಸಿನಿ ರಂಗವನ್ನು ದಶಕಗಳ ಕಾಲ ಆಳಿದವರು  ಆದರೆ ತಮ್ಮ ವೈಯಕ್ತಿಕ  ಕಾರಣಕ್ಕಾಗಿ ಸಿನಿ ಲೋಕದಿಂದ  ದೂರನೇ ಉಳಿದಿದ್ರು. ನಾಯಕಿಯಾಗಿ ಮತ್ತೆ ರಮ್ಯಾ ಕಾಣಿಸಿಕೊಳ್ಳಬೇಕು ಎಂದು ಫ್ಯಾನ್ಸ್ ದಿನ ನಿತ್ಯ ಪ್ರಾರ್ಥಿಸುತ್ತಿದ್ರು  ಒಂದಲ್ಲ ಒಂದು  ದಿನ   ನಾಯಕಿಯಾಗಿ  ಬರ್ತಾರೆ ಅನ್ನೋ ಕನಸು ಹಾಗೆ ಉಳಿದ್ರು  ನಿರ್ಮಾಪಕಿಯಾಗಿ ಆಗಮಿಸುತ್ತಿರುವದು  ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

ನಟಿ ರಮ್ಯಾ ಅವರು ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಗೆ ‘ಆಪಲ್​ ಬಾಕ್ಸ್​ ಸ್ಟುಡಿಯೋಸ್​’ ಎಂದು ಹೆಸರು ಇಡಲಾಗಿದೆ.

ಖ್ಯಾತ ನಟಿ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದ್ದರು. ಅದರಂತೆ, ಗಣೇಶ ಚತುರ್ಥಿಯ ಶುಭ ದಿನದಂದು ಗುಡ್ ನ್ಯೂಸ್​ ನೀಡಿದ್ದಾರೆ. ಅವರು ಈಗ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ತಮ್ಮ ಹೊಸ ನಿರ್ಮಾಣ ಸಂಸ್ಥೆಗೆ ‘ಆಪಲ್​ ಬಾಕ್ಸ್​’ ಎಂದು ಹೆಸರು ಇಟ್ಟಿದ್ದಾರೆ.

ಅಭಿಮಾನಿ ಕಾಲಿಗೆ ಬಿದ್ದ ಬಾಲಿವುಡ್ ನಟ…!

ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!

- Advertisement -

Latest Posts

Don't Miss