ನಟಿ ರಶ್ಮಿಕಾ ಮಂದಣ್ಣಗೆ ಕಂಕಣಭಾಗ್ಯ ಕೂಡಿ ಬಂದಿದೆ. ನ್ಯಾಷನಲ್ ಕ್ರಶ್ ಗುಟ್ಟಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ರಶ್ಮಿಕಾ ಮನಮೆಚ್ಚಿದ ಹುಡುಗ ಬೇರಾರು ಅಲ್ಲ.. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ. ಇವರಿಬ್ಬರು ಮೊದಲ ಬಾರಿಗೆ 2018ರಲ್ಲಿ ಗೀತ ಗೋವಿದಂ ಸಿನಿಮಾ ಸೆಟ್‌ನಲ್ಲಿ ಮೀಟ್ ಆಗಿದ್ರು. ಇವರಿಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ರು. ಇದೀಗ ರಿಯಲ್ ಲೈಫಲ್ಲೂ ಜೋಡಿಯಾಗುತ್ತಿದ್ದಾರೆ.
ಹಲವು ವರ್ಷಗಳ ಗಾಸಿಪ್ ನಿಜವಾಗಿದ್ದು ಅಕ್ಟೋಬರ್ 3ರಂದು, ಹೈದರಾಬಾದ್‌ನ ವಿಜಯ್ ದೇವರಕೊಂಡ ನಿವಾಸದಲ್ಲೇ ಎಂಗೇಜ್‌ಮೆಂಟ್ ಆಗಿದೆ. ಈ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಸಾಕಷ್ಟು ಗೌಪ್ಯವಾಗಿ ನಿಶ್ಚತಾರ್ಥ ಕಾರ್ಯಕ್ರಮ ನೆರವೇರಿದೆ. ಕುಟುಂಬಸ್ಥರು, ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದು, ಮದುವೆ ಡೇಟ್ ಕೂಡ ಫಿಕ್ಸ್ ಮಾಡಲಾಗಿದೆ.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ 2026ರ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಅದ್ಧೂರಿ ವಿವಾಹ ಸಮಾರಂಭಕ್ಕೆ ಪ್ಲಾನ್ ಮಾಡಲಾಗಿದೆಯಂತೆ. ಸದ್ಯ, ರಶ್ಮಿಕಾ ನಟನೆಯ ಥಮ ಸಿನಿಮಾ ದೀಪಾವಳಿಗೆ ರಿಲೀಸ್ ಆಗ್ತಿದೆ. ಇನ್ನು, ದೇವರಕೊಂಡ ಅಭಿನಯದ ಕಿಂಗ್‌ಡಮ್ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು, ಸಕ್ಸಸ್ ಕಂಡಿದೆ.