ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಬೆಡಗಿ.. ಅವನೇ ಶ್ರೀಮನ್ನಾರಾಯಣನ ಒಡತಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗ್ತಾರೆ. ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗೋ ಶಾನ್ವಿ ಇತ್ತೀಚೆಗೆ ಫ್ಯಾನ್ಸ್ ಗೆ ಏನಾದ್ರೂ ಪ್ರಶ್ನೆಗಳಿದ್ದರೆ ಕೇಳಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ಬೇಜಾನ್ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ. ಅದ್ರಲ್ಲೂ ನೆಟ್ಟಿಗೊಬ್ಬ ತೀರ ವೈಯಕ್ತಿಕ ಪ್ರಶ್ನೆ ಕೇಳಿದ್ದಾನೆ.
ನಿಮ್ಮ ಇಷ್ಟದ ಜಾಗ ಯಾವುದು..? ಹೇಗೆ ಕನ್ನಡ ಕಲಿತಿರಿ..? ಸುಂದರ ಫೋಟೋ ಶೇರ್ ಮಾಡಿ..? ಹೀಗೆ ಸಾಲು ಸಾಲು ಪ್ರಶ್ನೆಗಳು ಶಾನ್ವಿಗೆ ಹರಿದು ಬಂದಿದ್ದವು. ಎಲ್ಲದಕ್ಕೂ ಕೂಲ್ ಆಗಿಯೇ ಉತ್ತರಿಸಿದ ಮಾಸ್ಟರ್ ಪೀಸ್ ಬೆಡಗಿ ನೀವು ವರ್ಜಿನಾ ಹಾ ಎಂದು ನೆಟ್ಟಿಗೊಬ್ಬ ಕೇಳುತ್ತಾನೆ..? ಈ ಪ್ರಶ್ನೆ ನಿರ್ಲ್ಯಕ್ಷ ಮಾಡದೆ ಶಾನ್ವಿ, ಚಪ್ಪಾಳಿ ತಟ್ಟಿ ಎಂಥ ಪ್ರಶ್ನೆ ಕೇಳುತ್ತಿರಾ..? ಎಂದು ಸನ್ನೆ ಮಾಡಿದ್ದಾರೆ.
ಅಂದಹಾಗೇ ಶಾನ್ವಿ ಶ್ರೀವಾತ್ಸವ್ ಮೂಲತಃ ಉತ್ತರ ಭಾರತದವರು. ಕನ್ನಡ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟು ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಾ, ಅದ್ಭುತವಾಗಿ ಕನ್ನಡ ಭಾಷೆ ಮಾತನಾಡುವುದರ ಜೊತೆಗೆ ಬರೆಯುವುದನ್ನು ಕಲಿತಿದ್ದಾರೆ.