Movie News: ಊರ್ಫಿ ಜಾವೇದ್. ಚಿತ್ರ ವಿಚಿತ್ರ ಬಟ್ಟೆ ಧರಿಸಿ, ಆಗಾಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುವ, ತನ್ನ ಒಳ್ಳೆಯ ಮಾತು, ಒಳ್ಳೆಯ ಕೆಲಸಗಳಿಂದ ಕೆಲವರ ಮೆಚ್ಚುಗೆ ಗಳಿಸುವ ನಟಿ.
ಬಿಗ್‌ಬಾಸ್‌ಗೆ ಬಂದ ಬಳಿಕ, ಊರ್ಫಿ ಈ ರೀತಿ ಫ್ಯಾಷನ್ ಮಾಡಿ, ಫೇಮಸ್ ಆಗುತ್ತಿದ್ದಾರೆ. ಯಾರಾದ್ರೂ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡರೆ, ಇವಳು ಅಥವಾ ಇವನು ಊರ್ಫಿಯಿಂದ ಇನ್‌ಸ್ಪೈರ್ ಆಗಿರಬೇಕು ಅಂತಾನೇ ಜನ ಹೇಳುವಷ್ಟು, ಇವರ ಫ್ಯಾಷನ್ ಫೇಮಸ್ ಆಗಿದೆ.
ಹೀಗೆ ಸದಾ ತನ್ನದೇ ಆದ ಫ್ಯಾಷನ್‌ನಿಂದ ಟ್ರೋಲ್ ಆಗುವ ಊರ್ಫಿ ಜಾವೇದ್, ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮೇಕಪ್ ಮಾಡಿಕೊಂಡೋ ಅಥವಾ ಇನ್ನೇನೋ ಮಾಡಲು ಹೋಗಿ, ಊರ್ಫಿ ಜಾವೇದ್ ಮುಖ ಊದಿಕೊಂಡಿದೆ.
ಈ ಬಗ್ಗೆ ಬರೆದುಕೊಂಡಿರುವ ಊರ್ಫಿ ಜಾವೇದ್ ನನಗೆ ಅಲರ್ಜಿಯಾಗಿದೆ. ಮುಖ ಊದಿಕೊಂಡಿದೆ. ನನಗೆ ನಿಜವಾಗಲೂ ಎನರ್ಜಿಯಾಗಿದೆ. ಎಂದಿನಂತೆ ನಾನು ಬೆಳಿಗ್ಗೆ ಎದ್ದೆ. ಆಗ ನನ್ನ ಮುಖದಲ್ಲಿ ಅಲರ್ಜಿ ಇತ್ತು. ನನ್ನ ಮುಖ ಊದಿಕೊಂಡಿತ್ತು ಎಂದಿದ್ದಾರೆ. ಅಲ್ಲದೇ ಆಗಾಗ ಇವರಿಗೆ ಈ ಎನರ್ಜಿ ಆಗುತ್ತಲೇ ಇರುತ್ತದೆಯಂತೆ. ಇದಕ್ಕಾಗಿ ಇವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆದರೆ ಇದು ವಾಸಿಯಾಗಿಲ್ಲ ಅಂತಾರೆ ಊರ್ಫಿ.
ಅಲ್ಲದೇ, ನನ್ನ ಊದಿಕೊಂಡಿರುವ ಮುಖ ನೋಡಿ, ಟೀಕೆ ಮಾಡುವುದು, ಸಲಹೆ ಕೊಡವುದೆಲ್ಲ ಬೇಡ. ಸಹನಾಭೂತಿ ತೋರಿಸಿ, ಮುಂದುವರೆಯಿರಿ. ಅಲ್ಲದೇ, ನೀವು ಯಾರೂ ಬೊಟೋಕ್ಸ್ ಮಾಡಿಸಿಕೊಳ್ಳಲೇಬೇಡಿ ಎಂದು ಸಜೆಷನ್ ನೀಡಿದ್ದಾರೆ.
ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು
ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ
ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ