Bollywood News: ಬಾಲಿವುಡ್ ಸಿಂಗರ್ ಉದೀತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಕೂಡ ಉತ್ತಮ ಹಾಡುಗಾರ. ಆದರೆ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ, ಅವರು ವಿದ್ಯಾರ್ಥಿಯೊಬ್ಬನ ಫೋನ್ ತೆಗೆದು ಎಸೆದಿದ್ದರು. ನೆಟ್ಟಿಗರ ಆಕ್ರೋಶಕ್ಕೆ ಆದಿತ್ಯ ಅವರ ಈ ವರ್ತನೆ ಕಾರಣವಾಗಿತ್ತು.
ಆದರೆ ಇವೆಂಟ್ ಮ್ಯಾನೇಜರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆದಿತ್ಯ ನಾರಾಯಣ್ ಸುಮ್ಮ ಸುಮ್ಮನೆ ಕೋಪಗೊಂಡು, ಮೊಬೈಲ್ ತೆಗೆದು ಎಸೆದಿಲ್ಲ. ಬದಲಾಗಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿ, ಆದಿತ್ಯ ನಾರಾಯಣ್ ಕಾಲಿಗೆ ಮೊಬೈಲ್‌ನಿಂದ ಎರಡು ಬಾರಿ ಹೊಡೆದಿದ್ದಾನೆ. ಅಲ್ಲದೇ, ಆದಿತ್ಯ ನಾರಾಯಣ್ ಹಾಡಿಗೆ ಟಿಂಗಲ್ ಮಾಡುತ್ತಿದ್ದ.
ಎರಡು ಬಾರಿ ಕಾಲಿಗೆ ಬಡಿದಾಗಲೂ ಆದಿತ್ಯ ಸುಮ್ಮನಿದ್ದರೆ, ಬಳಿಕ ಸಿಟ್ಟಾದ ಆದಿತ್ಯ ಮೊಬೈಲ್ ತೆಗೆದು ಎಸೆದಿದ್ದಾರೆ. ಅಲ್ಲದೇ, ಈ ಘಟನೆ ಬಳಿಕ 2 ಗಂಟೆ ಕಾರ್ಯಕ್ರಮ ಕೊಟ್ಟಿದ್ದಾರೆ. ವಿದ್ಯಾರ್ಥಿ ಹೀಗೆ ಮಾಡಿದ ವೇಳೆ ಆದಿತ್ಯ ನಾರಾಯಣ್ ಆಯತಪ್ಪಿ ಕೆಳಗೆ ಬಿದ್ದಿದ್ದರೆ ಏನು ಗತಿ.? ಅಲ್ಲದೇ, ವಿದ್ಯಾರ್ಥಿಯ ತಪ್ಪಿಲ್ಲದೇ ಹೋಗಿದ್ದಲ್ಲಿ, ಆದಿತ್ಯ ಸುಮ್ಮ ಸುಮ್ಮನೆ ಕೋಪ ಮಾಡಿದ್ದಲ್ಲಿ, ಆ ವಿದ್ಯಾರ್ಥಿ, ಪ್ರಾಂಶುಪಾಲರ ಬಳಿ ಬಂದು ಕಂಪ್ಲೇಂಟ್ ಮಾಡುತ್ತಿದ್ದ. ಆದರೆ ಇಲ್ಲಿಯವರೆಗೂ ಆದಿತ್ಯ ವಿರುದ್ಧ ಯಾರೂ ದೂರು ನೀಡಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೀಡಿಯೋ ವೈರಲ್ ಆಗಿ, ಎಲ್ಲರೂ ಆದಿತ್ಯ ನಾರಾಯಣ್ ವಿರುದ್ಧವೇ ಮಾತನಾಡಿದ್ದಾರೆ ಎಂದು ಇವೆಂಟ್ ಮ್ಯಾನೇಜರ್ ಬೇಸರ ಹೊರಹಾಕಿದ್ದಾರೆ.
ಮೊನ್ನೆಯಷ್ಟೇ, ಛತ್ತೀಸ್‌ಘಡದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಆದಿತ್ಯ ನಾರಾಯಣ್ ಹಾಡು ಹಾಡುತ್ತ, ಕಾರ್ಯಕ್ರಮ ನೀಡುತ್ತಿದ್ದರು. ಇವರ ಹಾಡಿಗೆ ಎಲ್ಲ ವಿದ್ಯಾರ್ಥಿಗಳು ಎಂಜಾಯ್ ಮಾಡುತ್ತಿದ್ದರು. ಆದರೆ ಅಲ್ಲೊಬ್ಬ ವಿದ್ಯಾರ್ಥಿ, ಆದಿತ್ಯ ಪರ್ಫಾಮೆನ್ಸ್‌ನ್ನು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದ. ಏಕಾಏಕಿ ಸಿಟ್ಟಾದ ಆದಿತ್ಯ, ಕೋಪದಲ್ಲಿ ಬಂದು ಮೊಬೈಲ್ ತೆಗೆದು ಎಸೆದಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ, ಜನ ಆದಿತ್ಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ

