- Advertisement -
ಹಾಸನ: ಮದುವೆ ದಿನ ಅಂದರೆ, ಅದು ಪ್ರತಿಯೊಬ್ಬರ ಬಾಳಲ್ಲಿ, ವಿಶೇಷವಾಾದ ದಿನವಾಗಿರುತ್ತದೆ. ಆರಾಮವಾಗಿ ಮದುವೆಯಾಗಿ, ಖುಷಿ ಖುಷಿಯಾಗಿ ಮದುವೆಯನ್ನ ಎಂಜಾಯ್ ಮಾಡಿಕೊಂಡು, ಆ ದಿನವನ್ನ ಎಂಡ್ ಮಾಡಲಾಗುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ತಮ್ಮ ಮದುವೆಯನ್ನ ಇದಕ್ಕಿಂತ ವಿಶೇಷವಾಗಿ ಮಾಡಿಕೊಂಡಿದ್ದಾರೆ.
ಹಾಸನದ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ, ರೋಹಿತ್ ಎಂಬುವವರು ಇಂದು ಧರ್ಮಸ್ಥಳದಲ್ಲಿ, ಶ್ರೀ ಮಂಜುನಾಥೇಶ್ವರನ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಕಾರ್ಯಕ್ರಮ ಮುಗಿದ ಬಳಿಕ, ಧರ್ಮಸ್ಥಳದಿಂದ ಪತ್ನಿ ನಂದಿನಿಯೊಂದಿಗೆ ಹಾಸನದ ಮತಗಟ್ಟೆಗೆ ಬಂದು ವೋಟ್ ಮಾಡಿದ್ದಾರೆ. ಈ ಮೂಲಕ ಮದುವೆನೂ ಆಗಿ, ಮತದಾನವೂ ಮಾಡಿ, ತಮ್ಮ ಮದುವೆ ದಿನವನ್ನ, ವಿಶೇಷ ದಿನವಾಗಿ ಮಾಡಿಕೊಂಡಿದ್ದಾರೆ. ಇವರ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -