Thursday, December 26, 2024

Latest Posts

ಕೆರಗೋಡು ಬಳಿಕ ಎಂಕೆ (MK) ಹುಬ್ಬಳ್ಳಿಯಲ್ಲಿ ಧ್ವಜ ತೆರವು; ಭಗವಾ ಧ್ವಜ ಹಾರಿಸಲು ಕರೆ

- Advertisement -

Belagavi News: ಬೆಳಗಾವಿ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿದ ಬೆನ್ನಲ್ಲೇ ಬೆಳಗಾವಿಯಲ್ಲೂ ಧ್ವಜ ತೆರವು ಪ್ರಕರಣ ಸುದ್ದು ಮಾಡುತ್ತಿದೆ. ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದಲ್ಲಿ ಪೊಲೀಸರು ಭಗವಾ ಧ್ವಜಗೊಳಿಸಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ.

ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಭಗವಾ ಧ್ವಜ ತೆರವುಗೊಳಿಸಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಚಲೋ ಎಂಕೆ ಹುಬ್ಬಳ್ಳಿ ಕೈಗೊಂಡಿದ್ದು, ಬಿಜೆಪಿ ನಾಯಕರು, ಹಿಂದೂ ಪರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಇಡೀ ಗ್ರಾಮದಲ್ಲಿ ಭಗವಾ ಧ್ವಜ ಕಟ್ಟುವ ಅಭಿಯಾನವೂ ಕೈಗೊಳ್ಳಲು ಮುಂದಾಗಿದ್ದಾರೆ. ದೊಡ್ಡ ಹನುಮಾನ ಮಂದಿರ ಬಳಿ ಭಗವಾ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ.

ಭಗವಾ ಧ್ವಜ ಹಾರಿಸಲು ಕರೆ
ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಧ್ವಜ ತೆರವು ಹಿನ್ನೆಲೆ ಹನುಮಾನ್ ಮಂದಿರದ ಮುಂದೆ ಭಗವಾ ಧ್ವಜ ಹಾರಿಸಲು ಹಿಂದೂ ಸಂಘಟನೆಗಳಿಂದ ಕರೆ ನೀಡಲಾಗಿದ್ದು, ಪಟ್ಟಣ ಪಂಚಾಯತಿ ಕಚೇರಿ ಮುಂದೆ ಹಿಂದು ಯುವಕರು ಜಮಾಯಿಸಿದ್ದಾರೆ. ಅಲ್ಲದೆ, ಗ್ರಾಮದ ಸಂಬ್ಬನವರ್ ಕಾಲೋನಿಯಲ್ಲಿ ಧ್ವಜ ಕಟ್ಟೆ ನಿರ್ಮಾಣ ಮಾಡಲು ಮುಂದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬೀಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆಎಸ್ಆರ್ಪಿ ತುಕಡಿಯನ್ನೂ ನಿಯೋಜಿಸಲಾಗಿದೆ.

ಸ್ಥಳಕ್ಕೆ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಭೇಟಿ
ಭಗವಾ ಧ್ವಜ ತೆರವು ಖಂಡಿಸಿ ಹಿಂದೂ ಸಂಘಟನೆಗಳು ಬೀದಿಗಿಳಿಯಲು ಮುಂದಾಗಿದ್ದು, ಸ್ಥಳಕ್ಕೆ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯಿತಿ ಸಿಬ್ಬಂದಿ ವಾರದ ಹಿಂದೆ ಪೊಲೀಸರ ಸಮ್ಮುಖದಲ್ಲಿ ಧ್ವಜ ತೆರವು ಮಾಡಿದ್ದರು. ಧ್ವಜ ತೆರವು ಮಾಡಿದ ಜಾಗದಲ್ಲಿ ರಾತ್ರೋರಾತ್ರಿ ಧ್ವಜದ ಕಟ್ಟೆ ನಿರ್ಮಾಣ ಮಾಡಲಾಗಿದ್ದು, ಅದೇ ಜಾಗದಲ್ಲಿ ಭಗವಾ ಧ್ವಜ ಹಾರಿಸಲು ಯುವಕರು ಪಟ್ಟು ಹಿಡಿದಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿಣ ವಾತಾವರಣ ಹಿನ್ನೆಲೆ ಎಸ್ಪಿ ಭೇಟಿ ನೀಡಿದ್ದು, ಸ್ಥಳೀಯ ಪೊಲೀಸರು ಮತ್ತು ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

- Advertisement -

Latest Posts

Don't Miss